ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಅವಾಚ್ಯವಾಗಿ ನಿಂದಿಸಿದ ಆರೋಪದ ಹಿನ್ನೆಲೆಯಲ್ಲಿ ಬೆಳಗಾವಿಯ ಹೀರೇಬಾಗೇವಾಡಿ ಪೊಲೀಸರು ಬಿಜೆಪಿ ವಿಧಾನಪರಿಷತ್ ಸದಸ್ಯ ಸಿಟಿ ರವಿ ವಿರುದ್ದ ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.
ಗುರುವಾರ ವಿಧಾನಪರಿಷತ್ ನಲ್ಲಿ ಸಿಟಿ ರವಿ ತಮ್ಮನ್ನು ನಿಂದಿಸಿದ್ದಾರೆ ಎಂದು ಆರೋಪಿಸಿ ಸಭಾಪತಿ ಬಸವರಾಜ ಹೊರಟ್ಟಿಗೆ ಅವರಿಗೆ ದೂರು ನೀಡಿದರು.
ಸಭಾಪತಿಗೆ ದೂರು ನೀಡಿದ ನಂತರ ಹೀರೇಬಾಗೇಸವಾಡಿ ಪೊಲೀಸ್ ಠಾಣೆಯಲ್ಲಿ ತಮ್ಮದೇ ಲೆಟರ್ ಹೆಡ್ ನಲ್ಲಿ ಸಿಟಿ ವಿರುದ್ಧ ದೂರು ನೀಡಿದ್ದಾರೆ.
ಲಕ್ಷ್ಮೀ ಹೆಬ್ಬಾಳ್ಕರ್ ನೀಡಿದ ದೂರಿನ ಅನ್ವಯ ಬಿಎನ್ ಎಸ್ 75 ಮತ್ತು 79 ಕಾಯ್ದೆ ಅನ್ವಯ ಲೈಂಗಿಕತೆ ಕಿರುಕುಳ, ಮಹಿಳೆ ಬಟ್ಟೆ ಹಾಗೂ ಲೈಂಗಿಕ ನಿಂದನೆ ಮಹಿಳೆ ಇಚ್ಚೆ ವಿರುದ್ಧ ಟೀಕೆ ಅಡಿಯಲ್ಲಿ ಎಫ್ ಐಆರ್ ದಾಖಲಿಸಿಕೊಳ್ಳಲಾಗಿದೆ.
ಇದೇ ವೇಳೆ ಸಿಟಿ ರವಿ ಮೇಲೆ ಹಲ್ಲೆಗೆ ಯತ್ನಿಸಿದ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬೆಂಬಲಿಗರನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.