Friday, May 17, 2024
Google search engine
Homeಅಪರಾಧತಂಗಿಗೆ ಟಿವಿ ಉಡುಗೊರೆ ಕೊಟ್ಟ ಗಂಡನನ್ನು ಹೊಡೆದು ಕೊಲ್ಲಿಸಿದ ಪತ್ನಿ!

ತಂಗಿಗೆ ಟಿವಿ ಉಡುಗೊರೆ ಕೊಟ್ಟ ಗಂಡನನ್ನು ಹೊಡೆದು ಕೊಲ್ಲಿಸಿದ ಪತ್ನಿ!

ಗಂಡ ತನ್ನ ತಂಗಿಗೆ ಉಡುಗೊರೆಯಾಗಿ ಟಿವಿ ನೀಡಿದ್ದರಿಂದ ಅಸಮಾಧಾನಗೊಂಡ ಪತ್ನಿಯ ಕುಟುಂಬದವರು ಆತನನ್ನು ಹೊಡೆದು ಕೊಂದ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ತಂಗಿಯ ಮದುವೆ ಸಂದರ್ಭದಲ್ಲಿ ಪತ್ನಿ ಚಂದ್ರಪ್ರಕಾಶ್ ಮಿಶ್ರಾ ಚಿನ್ನದ ಉಂಗುರ ಮತ್ತು ಟಿವಿಯನ್ನು ಉಡುಗೊರೆಯಾಗಿ ನೀಡಿದ್ದ. ಇದರಿಂದ ಪತ್ನಿ ಅಸಮಾಧಾನಗೊಂಡಿದ್ದರಿಂದ ಕೆರಳಿದ ಆಕೆಯ ಕುಟುಂಬದವರು ಹೊಡೆದು ಕೊಂದಿದ್ದಾರೆ.

ಬಾರಾಬಂಕಿಯಲ್ಲಿ ಈ ಘಟನೆ ನಡೆದಿದ್ದು, ಏಪ್ರಿಲ್ 26ರಂದು ಪತ್ನಿಯ ಸೋದರಿಯ ಮದುವೆ ನಿಶ್ಚಯವಾಗಿತ್ತು. ಈ ಹಿನ್ನೆಲೆಯಲ್ಲಿ ಆಕೆಯ ಸೋದರಿಯ ಗಂಡ ಉಡುಗೊರೆ ನೀಡಲು ನಿರ್ಧರಿಸಿದ್ದ.

ಪತಿಯ ನಿರ್ಣಯದಿಂದ ಪತ್ನಿ ಛಬ್ಬಿ ಅಸಮಾಧಾನಗೊಂಡಿದ್ದಳು. ಸೋದರರಿಗೆ ಕರೆ ಮಾಡಿದ ಆಕೆ ಪತಿ ಚಂದ್ರಪ್ರಕಾಶ್ ಮಿಶ್ರಾಗೆ ತಕ್ಕ ಬುದ್ದಿ ಕಲಿಸಿ ಎಂದು ಸೂಚನೆ ನೀಡಿದ್ದಳು.

ಸೋದರರು ದೊಣ್ಣೆಯಿಂದ ಸುಮಾರು 1 ಗಂಟೆ ಕಾಲ ಚಂದ್ರಪ್ರಕಾಶ್ ನನ್ನು ಥಳಿಸಿದ್ದಾರೆ. ತೀವ್ರವಾಗಿ ಗಾಯಗೊಂಡ ಆತನನ್ನು ಆತನ ಮನೆಯವರು ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ.

ಪೊಲೀಸರು ಪತ್ನಿ ಕುಟುಂಬದ 5 ಮಂದಿಯನ್ನು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments