Monday, September 7, 2026
Google search engine
Homeಆರೋಗ್ಯಎದೆನೋವು ಎಂದು ಆಸ್ಪತ್ರೆಗೆ ಬಂದ ಮಹಿಳೆಯ ಹೊಟ್ಟೆಯಲ್ಲಿತ್ತು 14 ಪೆನ್ನು, 5 ಚಮಚ, 1 ಮೇಣದಬತ್ತಿ!

ಎದೆನೋವು ಎಂದು ಆಸ್ಪತ್ರೆಗೆ ಬಂದ ಮಹಿಳೆಯ ಹೊಟ್ಟೆಯಲ್ಲಿತ್ತು 14 ಪೆನ್ನು, 5 ಚಮಚ, 1 ಮೇಣದಬತ್ತಿ!

ಎದೆನೋವು ಎಂದು ಆಸ್ಪತ್ರೆಗೆ ಬಂದ ಮಹಿಳೆಯ ಹೊಟ್ಟೆಯಲ್ಲಿದ್ದ 14 ಪೆನ್ನು, 5 ಚಮಚ ಹಾಗೂ 1 ಮೇಣದ ಬತ್ತಿಯನ್ನು ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ನರಸರಾವ್‌ಪೇಟೆಯ ವೈದ್ಯರು ಹೊರತೆಗೆದ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.

ನರಸರಾವ್‌ಪೇಟೆ ತಾಲೂಕಿನ ಪೆಟ್ಲುರಿವರಿಪಲೆಂ ಗ್ರಾಮದ 33 ವರ್ಷದ ವಿವಾಹಿತ ಮಹಿಳೆಯ ಹೊಟ್ಟೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ವೈದ್ಯರೇ ಅಚ್ಚರಿಗೊಂಡಿದ್ದಾರೆ. ಮಹಿಳೆಯ ಕಳೆದ 10 ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಎರಡು ತಿಂಗಳ ಹಿಂದೆ ಆಕೆಗೆ ವಿಚ್ಛೇದನ ಕೂಡ ಆಗಿದೆ ಎಂದು ಮಹಿಳೆಯ ತಂದೆ ನೋಮುಲ ಹನುಮಂತ ರಾವ್ ತಿಳಿಸಿದ್ದಾರೆ.

ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಉದ್ದದ ಪೆನ್ನು, ಚಮಚ ಹೇಗೆ ಹೊಟ್ಟೆ ಸೇರಿತು. ಆಕಸ್ಮಿಕವಾಗಿ ಒಂದು ಹೋಗಬಹುದು. ಆದರೆ ಇಲ್ಲಿ ಹಲವಾರು ವಸ್ತುಗಳು ಕಂಡು ಬಂದಿದ್ದವು. ಆಕೆ ಸ್ವತಃ ನುಂಗಿದಳೇ ಅಥವಾ ಬಲವಂತವಾಗಿ ನುಂಗಿಸಲಾಗಿದೆಯೇ ಎಂಬ ಬಗ್ಗೆ ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ.

ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮಗಳು ಕೈಗೆ ಸಿಕ್ಕಿದ ವಸ್ತುವನ್ನು ನುಂಗುತ್ತಿದ್ದಳು. ಆದರೆ ಈ ಬಗ್ಗೆ ಕುಟುಂಬದವರಿಗೆ ತಿಳಿದಿರಲಿಲ್ಲ. ಎದೆನೋವು ಎಂದು ಆಸ್ಪತ್ರೆಗೆ ಸಾಗಿಸಿದಾಗ ಹೊಟ್ಟೆಯಲ್ಲಿ ಉದ್ದದ ಪೆನ್ನು, ಚಮಚ, ಮೇಣದ ಬತ್ತಿ ಕಂಡು ಅಚ್ಚರಿಗೆ ಒಳಗಾಗಿದ್ದಾರೆ.

‘ಲ್ಯಾಪ್ರೋಸ್ಕೋಪಿಕ್ ವಿಧಾನದ ಮೂಲಕ ನಾವು ಮಹಿಳೆಯ ಹೊಟ್ಟೆಯಲ್ಲಿ ರಂಧ್ರ ಮಾಡಿ 14 ಪೆನ್ನುಗಳು, 5 ಮರದ ಚಮಚಗಳು ಮತ್ತು ಒಂದು ಮೇಣದಬತ್ತಿಯನ್ನು ಹೊರತೆಗೆದಿದ್ದೇವೆ. ಈ ಪೆನ್ನುಗಳಲ್ಲಿ ಒಂದರ ಕ್ಯಾಪ್ ತೆಗೆಯಲಾಗಿತ್ತು, ಆದ್ದರಿಂದ ಅದು ಮಹಿಳೆಯನ್ನು ಚುಚ್ಚಿ ನೋವನ್ನು ಉಂಟುಮಾಡಿರಬಹುದು.

ಮಹಿಳೆ ಇಷ್ಟೊಂದು ವಸ್ತುಗಳನ್ನು ಹೇಗೆ ನುಂಗಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಸದ್ಯ ಆಕೆ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ’ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ತಜ್ಞ ಪಿ. ರಾಮಚಂದ್ರ ರೆಡ್ಡಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments