ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಕನ್ನಡ 11ನೇ ಆವೃತ್ತಿ ಆರಂಭದಿಂದಲೇ ಟಿಆರ್ ಪಿಯಲ್ಲಿ ಹೊಸ ದಾಖಲೆ ಬರೆಯುತ್ತಿದ್ದು, ಇದೀಗ ಮತ್ತೊಂದು ದಾಖಲೆ ಬರೆದಿದೆ.
ಹೌದು, ಸೂಪರ್ ಭಾನುವಾರ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಬಿಗ್ ಬಾಸ್ ಸ್ಪರ್ಧಿಗಳಿಗೆ ಟಿಆರ್ ಪಿಯಲ್ಲಿ ಯಾರ ಪಾಲು ಎಷ್ಟು ಎಂಬ ಆಟ ನೀಡಿದ್ದಾರೆ. ಆಟ ನೀಡುವ ಮುನ್ನ ಬಿಗ್ ಬಾಸ್ ಕಾರ್ಯಕ್ರಮದ ಟಿಆರ್ ಪಿ ವಿವರಗಳನ್ನು ನೀಡಿದರು.
ಯಾವುದೇ ಕಾರ್ಯಕ್ರಮ ಯಶಸ್ಸಾಗಿದೆ ಎಂದುಕೊಳ್ಳಬೇಕಾದರೆ ಟಿಆರ್ ಪಿ 7 ಬಂದರೆ ಸಾಕು. ಅಥವಾ ಸ್ಥಿರವಾಗಿ 7-8 ಕಾಯ್ದುಕೊಂಡರೆ ಸಕ್ಸಸ್ ಎನ್ನಲಾಗುತ್ತದೆ. ಆದರೆ ಬಿಗ್ ಬಾಸ್ ಕಾರ್ಯಕ್ರಮ ಸತತವಾಗಿ 10 ಟಿಆರ್ ಪಿ ಅಂಕ ಪಡೆಯುತ್ತಿದೆ. ಇದು ಸಣ್ಣ ಸಾಧನೆಯಲ್ಲ ಎಂದು ಹೇಳಿದರು.
ಕಳೆದ ಆವೃತ್ತಿಯಲ್ಲಿ ಬಿಗ್ ಬಾಸ್ ಟಿಆರ್ ಪಿ 11.6 ಅಂಕ ಪಡೆದಿತ್ತು. ಆದರೆ 11ನೇ ಆವೃತ್ತಿಯ ಬಿಗ್ ಬಾಸ್ ಮಧ್ಯಭಾಗದಲ್ಲಿ ಇರುವಾಗಲೇ 12.5 ಅಂಕ ಪಡೆದು ದಾಖಲೆ ಬರೆದಿದೆ ಎಂದು ಹೇಳಿದರು.
ಟಿಆರ್ ಪಿಯಲ್ಲಿ ಯಾರ ಪಾಲು ಎಷ್ಟು ಎಂದು ಆಟ ಆರಂಭಿಸಿದರು. ಈ ವಿಷಯದಲ್ಲಿ ಸ್ಪರ್ಧಿಗಳ ನಡುವೆ ವಾದ-ವಿವಾದ ನಡೆದಾಗ ಇಷ್ಟು ಟಿಆರ್ ಪಿ ಬರಲು ನಾನು ಇಲ್ಲಿ ವೇದಿಕೆಯ ಮೇಲೆ ನಿಂತಿಲ್ವಾ ಅದಕ್ಕೆ ಟಾಂಗ್ ನೀಡಿದರು.
ಭಾನುವಾರ ನಡೆದ ಎಲಿಮಿನೇಷನ್ ನಲ್ಲಿ ಟ್ವಿಸ್ಟ್ ನೀಡಲಾಗಿದೆ. ಕಳೆದ ಬಾರಿ ನಡೆದ ಹೈಡ್ರಾಮಾದಲ್ಲಿ ಶೋಭಾ ಶೆಟ್ಟಿ ಬಿಗ್ ಬಾಸ್ ಮನೆಯಿಂದ ಹೊರ ಹೋಗಿದ್ದರು. ಅಲ್ಲದೇ ವಾರದ ಮಧ್ಯದಲ್ಲಿ `ಮಾಧ್ಯಮ’ ಆಟ ಇದ್ದಾಗ ವೋಟಿಂಗ್ ಕರೆ ನೀಡಲಾಗಿತ್ತು.
ಈ ಎರಡು ಕಾರಣಗಳಿಗೆ ಬಿಗ್ ಬಾಸ್ ಈ ಬಾರಿ ಎಲಿಮಿನೇಷನ್ ಗೆ ವೋಟಿಂಗ್ ಪ್ರಕ್ರಿಯೆ ನಡೆಸಿರಲಿಲ್ಲ. ಆದರೆ ಟ್ವಿಸ್ಟ್ ನೀಡುವುದಕ್ಕಾಗಿ ಐಶ್ವರ್ಯ ಮತ್ತು ಚೈತ್ರಾ ಕುಂದಾಪುರ ಅವರನ್ನು ಗೌಪ್ಯವಾಗಿ ಮನೆಯಿಂದ ಹೊರಹೋಗುವವರು ಯಾರು ಎಂದು ಕುತೂಹಲ ಮೂಡಿಸಲಾಗಿತ್ತು.
ಕನ್ಷೇಷನ್ ರೂಮಿಗೆ ಚೈತ್ರಾ ಕುಂದಾಪುರ ಹೋದರೆ, ಆಕ್ಟಿವಿಟಿ ರೂಮ್ ನಲ್ಲಿ ಐಶ್ವರ್ಯ ಅವರನ್ನು ಕಳುಹಿಸಲಾಯಿತು. ಆದರೆ ಐಶ್ವರ್ಯ ಅವರನ್ನು ಸುದೀಪ್ ಸೇವ್ ಆಗಿರುವುದಾಗಿ ಘೋಷಿಸಿದರೆ, ಚೈತ್ರಾ ಕುಂದಾಪುರ ಅವರನ್ನು ಉಳಿಸಿಕೊಳ್ಳಲಾಗಿದ್ದು, ಸ್ಪರ್ಧಿಗಳು ಏನು ಮಾತನಾಡುತ್ತಾರೆ ಎಂದು ಕೇಳಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಈ ಮೂಲಕ ಅವರನ್ನು ಸೇವ್ ಮಾಡಿ ವಾಪಸ್ ಕಳುಹಿಸಲಾಗುತ್ತದೆ. ಇದರಿಂದ ಬಿಗ್ ಬಾಸ್ ಮನೆಯಲ್ಲಿ ಹೊಸ ಕಿಚ್ಚು ಹಚ್ಚುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಕುತೂಹಲ ಕಾಯ್ದುಕೊಳ್ಳಬೇಕಾದರೆ ಸೋಮವಾರ ರಾತ್ರಿ 9 ಗಂಟೆಯವರೆಗೂ ಕಾಯಬೇಕಾಗಿದೆ.