ತೆಲುಗು ನಟ ನಾಗಚೈತನ್ಯ ಮತ್ತು ಶೋಭಿತಾ ದುಲಿಪಾಲಾ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದು, ಮದುವೆಯ ಫೋಟೊ ಬಿಡುಗಡೆ ಮಾಡಲಾಗಿದೆ.
ಮದುವೆ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾಗದೇ ಇದ್ದರೂ ಮದುವೆ ಸಮಾರಂಭ ಅಕ್ಕಿನೇನಿ ನಾಗೇಶ್ವರ್ ರಾವ್ ಅವರ ಬಂಜಾರ ಹಿಲ್ಸ್ ನಲ್ಲಿರುವ 22 ಎಕರೆ ಜಾಗದಲ್ಲಿ ನಡೆದಿದ್ದು, ನಾಗಚೈತನ್ಯ ರೇಷ್ಮೆ ಜರತಾರಿ ವಸ್ತ್ರದಲ್ಲಿ ಇದ್ದರೆ, ಶೋಭಿತಾ ಸ್ವರ್ಣ ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ.
ಹಿರಿಯ ನಟ ನಾಗಾರ್ಜುನ ಅವರ ಪುತ್ರ ನಾಗಚೈತನ್ಯ ಮತ್ತು ನಟಿ ಶೋಭಿತಾ ದುಲಿಪಾಲಾ ಕಳೆದ ಆಗಸ್ಟ್ ನಲ್ಲಿ ಜೊತೆಗಿರುವುದಾಗಿ ಘೋಷಿಸಿದ್ದರು.
ನಟಿ ಸಮಂತಾ ಜೊತೆಗಿನ ಮದುವೆ ಮುರಿದ ನಂತರ ಕಳೆದ ಆಗಸ್ಟ್ ನಲ್ಲಿ ನಿಶ್ಚಿತಾರ್ಥ ನಡೆದಿತ್ತು. ಮದುವೆ ಸಮಾರಂಭ ಸುಮಾರು 8 ಗಂಟೆಗಳ ಕಾಲ ನಡೆದಿದ್ದು, ಸಿನಿಮಾದ ಹಲವು ಗಣ್ಯರು ಪಾಲ್ಗೊಂಡಿದ್ದರು ಎನ್ನಲಾಗಿದೆ.