Sunday, July 20, 2025
Google search engine
HomeಮನರಂಜನೆBIGG BOSS ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಕುಂದಾಪುರ ಕೋರ್ಟ್ ಗೆ ಹಾಜರು!

BIGG BOSS ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಕುಂದಾಪುರ ಕೋರ್ಟ್ ಗೆ ಹಾಜರು!

ಬಿಗ್ ಬಾಸ್ ಸ್ಪರ್ಧಿಯಾಗಿರುವ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಮಂಗಳವಾರ ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್ ಗೆ ಹಾಜರಾಗಿದ್ದಾರೆ.

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಯಾಗಿರುವ ಚೈತ್ರಾ ಕುಂದಾಪುರ ಕಾರ್ಯಕ್ರಮದ ನಡುವೆ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.

ಗೋವಿಂದಬಾಬು ಎಂಬುವವರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಕೋಟ್ಯಂತರ ರೂಪಾಯಿ ವಂಚಿಸಿದ್ದಾರೆ ಎಂಬ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಚೈತ್ರಾ ಕುಂದಾಪುರ ಖುದ್ದು ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಸೂಚಿಸಿತ್ತು.

ನ್ಯಾಯಾಲಯದ ಆದೇಶದ ಮೇರೆಗೆ ಚೈತ್ರಾ ಕುಂದಾಪುರ ಮಂಗಳವಾರ ಬಿಗ್ ಬಾಸ್ ಕಾರ್ಯಕ್ರಮದ ನಡುವೆ ಕೋರ್ಟ್ ಗೆ ಹಾಜರಾಗಿದ್ದು, ವಿಚಾರಣೆಯನ್ನು ಜನವರಿಗೆ 13ಕ್ಕೆ ಮುಂದೂಡಲಾಗಿದೆ.

ಬಿಗ್ ಬಾಸ್ ಮನೆಯಲ್ಲಿ 60 ದಿನ ಪೂರೈಸಿರುವ ಚೈತ್ರಾ ಕುಂದಾಪುರ ಬೆಂಗಾಲಿನೊಡನೆ ನೀಲಿ ಸೀರೆ ಧರಿಸಿದ್ದು, ಮುಖಕ್ಕೆ ಮಾಸ್ಕ್ ಮತ್ತು ಕಪ್ಪು ಕನ್ನಡಕ ಧರಿಸಿ ನ್ಯಾಯಾಲಯದ ಮುಂದೆ ಹಾಜರಾದರು.

ಬಿಗ್ ಬಾಸ್ ಮನೆಯಿಂದ ನೇರವಾಗಿ ನ್ಯಾಯಾಲಯಕ್ಕೆ ಆಗಮಿಸಿದ ಚೈತ್ರಾ ವಿಚಾರಣೆ ಮುಂದೂಡಿಕೆ ಆಗುತ್ತಿದ್ದಂತೆ ಬಿಗ್ ಮನೆಗೆ ಮರಳಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಈಗಾಗಲೇ ಐಮಾಧ್ಯಮ’ ಟಾಸ್ಕ್ ನಡೆಯುತ್ತಿದ್ದು, ಚೈತ್ರಾ ನಿರೂಪಕಿ ಪಾತ್ರ ನಿಭಾಯಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments