ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟಿಸಿರುವ ಪುಷ್ಪ-2 ಚಿತ್ರ 2ನೇ ದಿನ ಜಾಗತಿಕ ಮಟ್ಟದಲ್ಲಿ ಒಟ್ಟಾರೆ 400 ಕೋಟಿ ರೂ. ಸಂಗ್ರಹಿಸುವ ಮೂಲಕ ಭಾರತೀಯ ಚಿತ್ರರಂಗದಲ್ಲಿ ಮತ್ತೊಂದು ದಾಖಲೆ ಬರೆದಿದೆ.
ಮೊದಲ ದಿನದ 288 ಕೋಟಿ ಸಂಗ್ರಹಿಸಿ ಭರ್ಜರಿ ಓಪನಿಂಗ್ ಪಡೆದಿದ್ದ ಪುಷ್ಪ-2 ಎರಡು ದಿನಗಳಲ್ಲಿ ಒಟ್ಟಾರೆ 400 ಕೋಟಿ ರೂ. ಸಂಗ್ರಹಿಸಿ ಹೊಸ ದಾಖಲೆ ಬರೆದಿದೆ.
ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಹೊರತಾಗಿಯೂ ಭರ್ಜರಿ ಆರಂಭ ಪಡೆದಿರುವ ಪುಷ್ಪ-2 ವೀಕೆಂಡ್ ನಲ್ಲಿ ಕೂಡ ಇದೇ ಓಟ ಮುಂದುವರಿಸಲಿದ್ದು, ಇನ್ನೆರಡು ದಿನಗಳಲ್ಲಿ 500 ಕೋಟಿ ರೂ. ಸಂಗ್ರಹಿಸುವ ಮೂಲಕ ಮತ್ತೊಂದು ದಾಖಲೆ ಬರೆಯುವ ವಿಶ್ವಾಸದಲ್ಲಿದೆ.
ಭಾರತದಲ್ಲಿ ಒಟ್ಟಾರೆ 265 ಕೋಟಿ ರೂ. ಸಂಗ್ರಹಿಸಿರುವ ಪುಷ್ಪ-೨, ಎರಡನೇ ದಿನ 90 ಕೋಟಿ ರೂ. ಸಂಗ್ರಹಿಸಿದೆ.
ಪುಷ್ಪ-2 ಚಿತ್ರ ಮೊದಲೆರಡು ದಿನಗಳ ಗಳಿಕೆಯಲ್ಲಿ ಆರ್ ಆರ್ ಆರ್, ಬಾಹುಬಲಿ, ಕೆಜಿಎಫ್-೨ ದಾಖಲೆಗಳನ್ನು ಮುರಿದಿದೆ. ವಿಶೇಷ ಅಂದರೆ ಶಾರೂಖ್ ಖಾನ್ ಅವರ ಜವಾನ್ ಚಿತ್ರದ ಮೊದಲೆರಡು ದಿನಗಳ ಗಳಿಕೆಯ ದಾಖಲೆಯನ್ನು ಹಿಂದಿಯಲ್ಲಿ ಕೂಡ ಪುಷ್ಪ-2 ಮುರಿದಿದೆ.
ಎಸ್.ಎಸ್. ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ 250 ಕೋಟಿ ರೂ. ಗಳಿಕೆಯ ದಾಖಲೆಯನ್ನು ಪುಷ್ಪ-2 ಮುರಿದಿದೆ.