ಬೆಳಗಾವಿ: ವಿವಾಹಿತ ಪ್ರೇಯಸಿಗೆ 9 ಬಾರಿ ಚಾಕುವಿನಿಂದ ಇರಿದು ಕೊಂದ ಬಳಿಕ ಪಾಗಲ್ ಪ್ರೇಮಿ ತಾನೂ ಆತ್ಮಹತ್ಯೆ ಮಾಡಿಕೊಂಡ ದಾರಣ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ 2 ಮಕ್ಕಳ ತಾಯಿಯಾದ ರೇಷ್ಮಾ (29) ಅವರನ್ನು ಕೊಂದ ಮೂರು ಮಕ್ಕಳ ತಂದೆಯಾದ ತಂದೆ ಆನಂದ ಸತಾರ್ (31) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಒಂದೇ ಊರಿನ, ಒಂದೇ ಕಾಲೊನಿಯ ಇಬ್ಬರ ಮಧ್ಯೆ ಹಲವು ವರ್ಷಗಳಿಂದ ಸ್ನೇಹ ಇತ್ತು. ಮದುವೆ ಬಳಿಕ ಸಲುಗೆ ಹೆಚ್ಚಾಗಿ ಅದು ಅಕ್ರಮ ಸಂಬಂಧಕ್ಕೆ ತಿರುಗಿತ್ತು. ಮದುವೆ ಬಳಿಕವೂ ರೇಷ್ಮಾ ಜೊತೆಗೆ 3 ವರ್ಷಗಳಿಂದ ಸಲುಗೆ ಹೊಂದಿದ್ದ.
ಕಳೆದ ತಿಂಗಳಷ್ಟೇ ರೇಷ್ಮಾ ಪತಿ ಕೈಗೆ ಇಬ್ಬರೂ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದರು. ಈ ಬಗ್ಗೆ ನಂದಗಡ ಪೊಲೀಸರಿಗೆ ಮಾಹಿತಿ ರೇಷ್ಮಾ ಪತಿ ಶೀವು ತಿರವಿರ ಮಾಹಿತಿ ನೀಡಿದ್ದ.
ಪೊಲೀಸರ ವಾರ್ನ್ ಬಳಿಕ ಆನಂದನಿಂದ ರೇಷ್ಮಾ ಅಂತರ ಕಾಯ್ದುಕೊಂಡಿದ್ದರು. ಇದರಿಂದ ಸಿಟ್ಟಿಗೆದ್ದ ಪಾಗಲ್ ಆನಂದ ಮನೆಯ ಹಿಂಬಾಗಿಲಿನಿಂದ ಹೋಗಿ ರೇಷ್ಮಾಳನ್ನ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ರೇಷ್ಮಾ ಪುತ್ರಿಯ ಎದುರೇ ಚಾಕುವಿನಿಂದ 9 ಸಲ ಚುಚ್ಚಿ ಹತ್ಯೆಗೈದಿದ್ದಾನೆ.
ನಂತರ ಭಯಗೊಂಡ ಆನಂದ್ ಕೂಡ ಅದೇ ಚಾಕುವಿನಿಂದ ಚುಚ್ಚಿಕೊಂಡಿದ್ದಾನೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಆನಂದನನ್ನ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಖಾಸಗಿ ಆಸ್ಪತ್ರೆಯಲ್ಲಿ ಆನಂದ ಮೃತಪಟ್ಟಿದ್ದಾನೆ.
