ಉಕ್ರೇನ್ ಬಂದರಿನಿಂದ ಹೊರಟ್ಟಿದ್ದ ಭಾರತೀಯ ಹಡಗಿನ ಮೇಲೆ ನಡೆದ ದಾಳಿಯಲ್ಲಿ ನಾಲ್ವರು ಭಾರತೀಯರು ಮೃತಪಟ್ಟಿದ್ದು, ಒಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ನಡೆದಿದೆ.
ಉಕ್ರೇನ್ ನ ಒಡೆಸಾ ಬಂದರಿನಲ್ಲಿದ್ದ ಹಡಗಿನಲ್ಲಿ ೧೫ ಸಿಬ್ಬಂದಿ ಇದ್ದರು. ದಾಳಿಯಲ್ಲಿ ಹಡಗಿಗೆ ಅಪಾರ ಹಾನಿಯಾಗಿದ್ದು, ನಾಲ್ವರು ಭಾರತೀಯರು ಮೃತಪಟ್ಟಿರುವುದು ದೃಢಪಟ್ಟಿದೆ.
ಕೇಂದ್ರ ವಿದೇಶಾಂಗ ಸಚಿವಾಲಯ ಈ ವಿಷಯವನ್ನು ದೃಢಪಡಿಸಿದ್ದು, ಘಟನೆಯ ಬಗ್ಗೆ ನಾವು ಸೂಕ್ಷ್ಮವಾಗಿ ಅಭ್ಯಾಸ ನಡೆಸಿದ್ದು, ತುರ್ತು ರಕ್ಷಣೆ ಕುರಿತು ಸ್ಥಳೀಯ ಭದ್ರತಾ ಸಿಬ್ಬಂದಿಗೆ ಸೂಚಿಸಿದ್ದೇವೆ ಎಂದು ಹೇಳಿಕೆ ನೀಡಿದೆ.
ರಷ್ಯಾದ ಕ್ಷಿಪಣಿಗಳ ದಾಳಿಯಲ್ಲಿ ಭಾರತದ ಹಡಗಿಗೆ ಹಾನಿಯಾಗಿದೆ ಎಂದು ಉಕ್ರೇನ್ ಸರ್ಕಾರ ಹೇಳಿಕೆ ನೀಡಿದೆ. ಆದರೆ ಈ ಬಗ್ಗೆ ಭಾರತ ಯಾವುದೇ ಪ್ರತಿಕ್ರಿಯೆ ನೀಡಿಲ್ಲ



