Sunday, August 9, 2026
Google search engine
Homeದೇಶಸರ್ಕಾರದಿಂದ ನೇಮಕಗೊಂಡ ಪೂಜಾರಿಗಳಿಗೆ ನಿಷೇಧ: ಗರ್ಭಗುಡಿಗೆ ಬಿಡದ ತಿರುಚನಾಪಳ್ಳಿ ದೇವಸ್ಥಾನದ ಅರ್ಚಕರು!

ಸರ್ಕಾರದಿಂದ ನೇಮಕಗೊಂಡ ಪೂಜಾರಿಗಳಿಗೆ ನಿಷೇಧ: ಗರ್ಭಗುಡಿಗೆ ಬಿಡದ ತಿರುಚನಾಪಳ್ಳಿ ದೇವಸ್ಥಾನದ ಅರ್ಚಕರು!

ಚೆನ್ನೈ: ಪೂಜಾರಿಕೆಗಾಗಿ ಬ್ರಾಹ್ಮಣೇತರ ವ್ಯಕ್ತಿಗಳನ್ನು ನೇಮಕ ಮಾಡುವ ತಮಿಳುನಾಡು ಸರ್ಕಾರದ ಕ್ರಮಕ್ಕೆ ತಿರುಚನಾಪಳ್ಳಿಯ ಕುಮಾರವಯಲೂರ್ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಅರ್ಚಕರು ಸೆಡ್ಡು ಹೊಡೆದಿದ್ದಾರೆ.

೨೦೨೧ರಲ್ಲಿ ಆ ದೇವಸ್ಥಾನದಲ್ಲಿ ಅರ್ಚಕರಾಗಿ ಸರ್ಕಾರದಿಂದ ನೇಮಕವಾಗಿದ್ದ ಇಬ್ಬರಿಗೆ ತಿರುಚಿನಾಪಳ್ಳಿಯ ದೇವಸ್ಥಾನ ಪ್ರವೇಶಿಸದಂತೆ ನಿಷೇಧಿಸಲಾಗಿದೆ.

ಸರ್ಕಾರದಿಂದ ಅರ್ಚಕರಾಗಿ ನೇಮಕಗೊಂಡಿದ್ದ ಎಸ್. ಪ್ರಭು ಹಾಗೂ ಜಯಪಾಲ್ ಎಂಬವರು ಹಾಗೆಂದು, ಆರೋಪಿಸಿದ್ದಾರೆ. ಈ ಕುರಿತಂತೆ, ಮುಖ್ಯಮಂತ್ರಿ ಸ್ಟಾಲಿನ್ ಹಾಗೂ ಮುಜರಾಯಿ ಇಲಾಖೆಗೆ ಪತ್ರ ಅವರಿಬ್ಬರು ಬರೆದಿದ್ದಾರೆ.

“ಫೆ. 19ರಿಂದ, ಆ ದೇವಸ್ಥಾನದ ದೇವರಾದ ಮುರುಗನ್ ದೇವರಿಗೆ ಕುಂಭಾಭಿಷೇಕ ನೆರವೇರಿಸಲಾಗುತ್ತಿದೆ. ಈ ಸಂದರ್ಭದಲ್ಲಿ, ಸರ್ಕಾರದಿಂದ ನೇಮಕವಾಗಿರುವ ಅರ್ಚಕರನ್ನು ದೇವಸ್ಥಾನದಿಂದ ಬಹಿಷ್ಕರಿಸಲಾಗಿದೆ ಎಂದು ಕೆಲವು ಆರೋಪಿಸಿದ್ದಾರೆ.

ದೇವಸ್ಥಾನದಲ್ಲಿ ಉತ್ಸವ ನಡೆಯುತ್ತಿರುವ ಸಂದರ್ಭದಲ್ಲಿ ತಮ್ಮನ್ನು ದೇವಸ್ಥಾನದ ಅಂಗಳಕ್ಕೂ ಬಿಟ್ಟುಕೊಳ್ಳುತ್ತಿಲ್ಲ. ನಮ್ಮನ್ನು ದೇವಸ್ಥಾನದಿಂದ ಹೊರಗೆ ಹಾಕಲಾಗಿದೆ” ಎಂದು ಅವರು ಆರೋಪಿಸಿದ್ದಾರೆ.

ತಾವು ಈ ದೇವಸ್ಥಾನದ ಅರ್ಚಕರಾಗಿ ನೇಮಕವಾದ ದಿನದಿಂದ ಅರ್ಚಕರು ಗರ್ಭಗುಡಿಯ ಒಳಗೆ ನಮ್ಮನ್ನು ಬಿಟ್ಟೇ ಇಲ್ಲ. ಈಗಾಗಲೇ ನಾವು ಈ ದೇವಸ್ಥಾನಕ್ಕೆ ಅರ್ಚಕರಾಗಿ ನೇಮಕವಾಗಿ ಮೂರು ವರ್ಷಗಳೇ ಕಳೆದಿವೆ ಎಂದು ಸಂತ್ರಸ್ತರು ಹೇಳಿದರು..

ಆದರೆ ಗರ್ಭಗುಡಿಯೊಳಗೆ ಹೋಗಿ ದೇವರಿಗೆ ಅಲಂಕಾರ ಮಾಡುವುದು ಅಥವಾ ದೇವರಿಗೆ ಪೂಜೆ ಮಾಡಲು ಸಾಧ್ಯವಾಗಿಲ್ಲ” ಎಂದು ಅವರು ದೂರಿದ್ದಾರೆ.

ಕ್ರಾಂತಿಕಾರಿ ಕಾನೂನು?

2021ರಲ್ಲಿ ತಮಿಳುನಾಡು ಸರ್ಕಾರ ಧಾರ್ಮಿಕ ಕ್ಷೇತ್ರಗಳಲ್ಲಿ ಸಮಾನತೆ ತರುವ ಉದ್ದೇಶದಿಂದ ಅರ್ಚಕ ವೃತ್ತಿಗಳಿಗೆ ಅನ್ಯ ಜಾತಿಯವರಿಗೆ ಅರ್ಹತೆಯ ಆಧಾರದಲ್ಲಿ ನೇಮಿಸಿಕೊಳ್ಳುವ ಹೊಸ ಕಾನೂನು ಜಾರಿ ಮಾಡಿತ್ತು.

ಈ ಕಾನೂನಿನಡಿ, ಅರ್ಚಕ ವೃತ್ತಿಯಲ್ಲಿ ಆಸಕ್ತಿ ಹೊಂದಿರುವವರಿಗೆ ವೇದ, ಮಂತ್ರಗಳನ್ನು ಕಲಿಸುವ ಕೋರ್ಸ್ ಗಳನ್ನು ಸರ್ಕಾರವೇ ಆರಂಭಿಸಿ ಅದಕ್ಕಾಗಿ ಪ್ರತ್ಯೇಕ ಶಾಲೆಗಳನ್ನು ತೆರೆಯಿತು.

ಆ ಯೋಜನೆಯಡಿ, ಆಸಕ್ತ ಅಭ್ಯರ್ಥಿಗಳಿಗೆ ಅರ್ಚಕ ವೃತ್ತಿಗೆ ಬೇಕಾದ ಎಲ್ಲಾ ವಿದ್ಯೆ ಹಾಗೂ ಪೂಜಾ ವಿಧಾನಗಳನ್ನು ಕಲಿಸಿಕೊಟ್ಟು, ಅಲ್ಲಿ ಪ್ರಮಾಣ ಪತ್ರ ಪಡೆದವರನ್ನು ಸರ್ಕಾರದ ಸುಪರ್ದಿಯಲ್ಲಿರುವ ದೇವಸ್ಥಾನಗಳಲ್ಲಿ ಅರ್ಚಕರನ್ನಾಗಿ ನೇಮಿಸಲಾಗಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments