Wednesday, September 30, 2026
Google search engine
Homeಜಿಲ್ಲಾ ಸುದ್ದಿಗೃಹಲಕ್ಷ್ಮೀ ಹಣದಿಂದ ಮಗಳಿಗೆ ಕಂಪ್ಯೂಟರ್ ಕೊಡಿಸಿದ ಮುಸ್ಲಿಂ ಮಹಿಳೆ!

ಗೃಹಲಕ್ಷ್ಮೀ ಹಣದಿಂದ ಮಗಳಿಗೆ ಕಂಪ್ಯೂಟರ್ ಕೊಡಿಸಿದ ಮುಸ್ಲಿಂ ಮಹಿಳೆ!

ಮಗನಿಗೆ ಬೈಕ್ ಕೊಡಿಸಿದೆ… ಚಿನ್ನದ ಸರ ಮಾಡಿಕೊಂಡೆ.. ಹೊಳಿಗೆ ಊಟ ಹಾಕಿಸಿದೆ.. ಹೀಗೆ ರಾಜ್ಯದ ಬಡ ಮಹಿಳೆಯರು ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆಯ ಹಣದಿಂದ ಅದೆಷ್ಟು ನೆರವಾಗಿದೆ ಎಂದು ಹೇಳಿಕೊಳ್ಳುವ ಮೂಲಕ ಸುದ್ದಿ ಮಾಡುತ್ತಿದ್ದಾರೆ.

ಇದೀಗ ಅಂತಹದ್ದೇ ಒಂದು ಘಟನೆ ತುಮಕೂರಿನಲ್ಲಿ ನಡೆದಿದ್ದು, ಗೃಹಲಕ್ಷ್ಮೀ ಯೋಜನೆಯ ಹಣದಿಂದ ಕೂಡಿಟ್ಟ ದುಡ್ಡಿನಿಂದ ಮುಸ್ಲಿಮ್ ಮಹಿಳೆಯೊಬ್ಬರು ಮಗಳಿಗೆ ಕಂಪ್ಯೂಟರ್ ಕೊಡಿಸುವ ಮೂಲಕ ಓದಿಗೆ ನೆರವಾಗಿದ್ದಾರೆ.

ತುಮಕೂರು ಜಿಲ್ಲೆ ತಿಪಟೂರಿನ ಗಾಂಧಿ ನಗರದ ಕೆರಗೋಡಿ ನಿವಾಸಿ ಸಾಧಿಕ್ ಹಾಗೂ ನಗ್ಮಾ ದಂಪತಿ ತಮ್ಮ ಪುತ್ರಿ ಸೈದಾ ಆಫೀಫಾಗೆ ಓದಲು ಅನುಕೂಲ ಆಗಲಿ ಎಂದು ಗೃಹಲಕ್ಷ್ಮೀ ಹಣವನ್ನು ಕೂಡಿಟ್ಟು ಕಂಪ್ಯೂಟರ್ ಕೊಡಿಸಿದ್ದಾರೆ.

ಮೆಕಾನಿಕ್ ಆಗಿರುವ ಸಾಧಿಕ್ ಕೂಡ ಹಣ ಸಹಾಯ ಮಾಡಿದ್ದಾರೆ. ಪೋಷಕರ ಗೃಹಲಕ್ಷ್ಮಿ ಹಣದ ಸದ್ಭಳಕೆ ಇತರೆ ಪೋಷಕರಿಗೆ ಪ್ರೇರಣೆಯಾಗಿದೆ. ರಾಜ್ಯದ ಇತರೆ ಕಡೆಯೂ ಗೃಹಲಕ್ಷ್ಮೀ ಹಣವನ್ನು ಮಹಿಳೆಯರು ಸದ್ಬಳಕೆ ಮಾಡಿಕೊಂಡು ಮಾದರಿಯಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments