Friday, July 3, 2026
Google search engine
Homeಕಾನೂನುನನ್ನ ಖಾಸಗಿ ವೀಡಿಯೊಗಳನ್ನು ಮರಳಿಸಿ: ಪ್ರಜ್ವಲ್ ರೇವಣ್ಣ ಮನವಿಗೆ ಹೈಕೋರ್ಟ್ ಚಾಟಿ!

ನನ್ನ ಖಾಸಗಿ ವೀಡಿಯೊಗಳನ್ನು ಮರಳಿಸಿ: ಪ್ರಜ್ವಲ್ ರೇವಣ್ಣ ಮನವಿಗೆ ಹೈಕೋರ್ಟ್ ಚಾಟಿ!

ನನ್ನ ವಿರುದ್ಧ ದೂರು ನೀಡದೇ ಇರುವ ಸಂತ್ರಸ್ತೆಯರ ಜೊತೆಗಿರುವ ಅಶ್ಲೀಲ ವೀಡಿಯೋ ಹಾಗೂ ಫೋಟೊಗಳನ್ನು ನನ್ನ ಖಾಸಗಿ ವೀಡಿಯೊ ಎಂದು ಪರಿಗಣಿಸಿ ಮರಳಿಸುವಂತೆ ಮಾಜಿ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಮನವಿಗೆ ಕರ್ನಾಟಕ ಹೈಕೋರ್ಟ್ ಚಾಟಿ ಬೀಸಿದೆ.

ಹಲವಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಂತ್ರಸ್ತೆಯರ ಡಿಜಿಟಲ್ ಸಾಕ್ಷ್ಯ ಮರಳಿಸುವಂತೆ ಸಲ್ಲಿಸಿದ ಮನವಿಯನ್ನು ಗುರುವಾರ ಹೈಕೋರ್ಟ್ ನಿರಾಕರಿಸಿದೆ. ಅಲ್ಲದೇ ಪ್ರಕರಣ ದಾಖಲು ಮಾಡಿದವರ ವಿಡಿಯೋ ಮಾತ್ರ ನೀಡಿ, ಇತರ ಸಂತ್ರಸ್ತೆಯರ ವಿಡಿಯೋ ನೀಡದಂತೆ ಹೈಕೋರ್ಟ್ ಆದೇಶ ನೀಡಿದೆ.

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎಸ್‌ಐಟಿ ಜಪ್ತಿ ಮಾಡಿರುವ ವಿಡಿಯೋ ನೀಡುವಂತೆ ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿದ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶ ಎಂ. ನಾಗಪ್ರಸನ್ನ ಅವರಿದ್ದ ಏಕದಸ್ಯ ಪೀಠ, ಎಲ್ಲ ವಿಡಿಯೋಗಳು ಅಶ್ಲೀಲವಾಗಿದೆ. ಪ್ರಜ್ವಲ್ ರೇವಣ್ಣ ಅಂದ ಕೂಡಲೇ ಕಾನೂನು ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಚಾಟಿ ಬೀಸಿತು.

ಅತ್ಯಾಚಾರ, ಲೈಂಗಿಕ ದೌರ್ಜನ್ಯ ಮತ್ತು ಕ್ರಿಮಿನಲ್ ಬೆದರಿಕೆಯ ಕನಿಷ್ಠ ನಾಲ್ಕು ಪ್ರತ್ಯೇಕ ಪ್ರಕರಣಗಳಲ್ಲಿ ಆರೋಪಿಯಾಗಿರುವ ರೇವಣ್ಣ, ತಾನು ಕೇಳುತ್ತಿರುವ ಡಿಜಿಟಲ್ ಸಾಕ್ಷ್ಯಗಳು ಅಶ್ಲೀಲವಾಗಿಲ್ಲ ಎಂದು ವಾದವನ್ನು ಹೈಕೋರ್ಟ್ ತಿರಸ್ಕರಿಸಿತು.

ಇತರ ಸಂತ್ರಸ್ತೆಯರ ಖಾಸಗಿತನ ರಕ್ಷಿಸುವ ಪ್ರಾಮುಖ್ಯತೆಯನ್ನು ಒತ್ತಿಹೇಳಿತು. ಮನೆ ಕೆಲಸದವರ ಮೇಲಿನ ಅತ್ಯಾಚಾರಕ್ಕೆ ಸಂಬಂಧಿಸಿದ ಕೇಸ್ ನಲ್ಲಿ ವಿಡಿಯೋ ಸಾಕ್ಷ್ಯ ಪಡೆಯಲು ನೀವು ಅರ್ಹರಾಗಿದ್ದೀರಿ, ಆದರೆ ಇತರೆ ಮಹಿಳೆಯರ ಖಾಸಗಿತನ ಉಲ್ಲಂಘಿಸುವ ದಾಖಲೆಗಳು ನಿಮಗೆ ಏಕೆ ಬೇಕು? ಎಂದು ನ್ಯಾಯಾಧೀಶರಾದ ನಾಗಪ್ರಸನ್ನ ಅವರು ಪ್ರಶ್ನಿಸಿದರು.

ಈ ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದ ಎಸ್‌ಪಿಪಿ ಜಗದೀಶ್, ಈಗಾಗಲೇ ಎಲ್ಲಾ ವಿಡಿಯೋ ಫೋಟೋ ನೀಡಲಾಗಿದೆ. ಪ್ರಕರಣ ವಿಳಂಬ ಮಾಡುವುಕ್ಕೆ ಕೋರ್ಟ್ ಗಳಲ್ಲಿ ಈ ರೀತಿ ಅರ್ಜಿ ಹಾಕಲಾಗುತ್ತಿದೆ. ಕೆಳಹಂತದ ನ್ಯಾಯಾಲಯದಲ್ಲೂ ಕೂಡ ಸಿಡಿಆರ್ ಕೇಳಿ ಅರ್ಜಿ ಹಾಕಿದ್ದಾರೆ ಎಂದು ವಾದಿಸಿದರು. ನಾಲ್ಕು ಪ್ರಕರಣಗಳಿಗೆ ಸಂಬಂಧಿಸಿದ ಚಿತ್ರಗಳು ಮತ್ತು ವೀಡಿಯೊಗಳ ಪ್ರತಿಗಳನ್ನು ಈಗಾಗಲೇ ಪ್ರತಿವಾದಿಗೆ ಒದಗಿಸಲಾಗಿದೆ.

ರೇವಣ್ಣ ಈಗ ಅವರ ಕಾರು ಚಾಲಕನ ಸ್ಯಾಮ್ ಸಂಗ್ ಫೋನ್ ನಿಂದ ವಶಕ್ಕೆ ಪಡೆಯಲಾದ 15,000 ಕ್ಕೂ ಹೆಚ್ಚು ಚಿತ್ರಗಳು ಮತ್ತು 2,000 ವೀಡಿಯೊಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments