Saturday, May 16, 2026
Google search engine
Homeಕ್ರೀಡೆಹೈದರಾಬಾದ್ ಗೆ ಸತತ 4ನೇ ಸೋಲು; ಗುಜರಾತ್ ಗೆ ಹ್ಯಾಟ್ರಿಕ್ ಗೆಲುವು

ಹೈದರಾಬಾದ್ ಗೆ ಸತತ 4ನೇ ಸೋಲು; ಗುಜರಾತ್ ಗೆ ಹ್ಯಾಟ್ರಿಕ್ ಗೆಲುವು

ಮಧ್ಯಮ ವೇಗಿ ಮೊಹಮದ್ ಸಿರಾಜ್ ಮಾರಕ ದಾಳಿ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡ 7 ವಿಕೆಟ್ ಗಳಿಂದ ಗೆದ್ದು ಹ್ಯಾಟ್ರಿಕ್ ಸುಲಭ ಜಯ ಸಾಧಿಸಿದರೆ, ಸನ್ ರೈಸರ್ಸ್ ಹೈದರಾಬಾದ್ ಸತತ ನಾಲ್ಕನೇ ಸೋಲಿನೊಂದಿಗೆ ಕೊನೆಯ ಸ್ಥಾನಕ್ಕೆ ಕುಸಿದಿದೆ.

ಹೈದರಾಬಾದ್ ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 20 ಓವರ್ ಗಳಲ್ಲಿ 8 ವಿಕೆಟ್ ಗೆ 152 ರನ್ ಗಳಿಗೆ ಕಡಿವಾಣ ಹಾಕಿದ ಗುಜರಾತ್ ಟೈಟಾನ್ಸ್ ತಂಡ 16.4 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.

ಸನ್ ರೈಸರ್ಸ್ ಹೈದರಾಬಾದ್ ತವರಿನಲ್ಲಿ ಅನುಭವಿಸಿದ ಸೋಲಿನ ಜೊತೆಗೆ ಇದು ಸತತ 4 ಸೋಲಾಗಿದ್ದು, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿಯಿತು. ಗುಜರಾತ್ ಟೈಟಾನ್ಸ್ ಹ್ಯಾಟ್ರಿಕ್ ಗೆಲುವಿನೊಂದಿಗೆ 6 ಅಂಕ ಸಂಪಾದಿಸಿ 2ನೇ ಸ್ಥಾನಕ್ಕೆ ಜಿಗಿಯಿತು.

ಸಾಧಾರಣ ಗುರಿ ಬೆಂಬತ್ತಿದ ಗುಜರಾತ್ ಟೈಟಾನ್ಸ್ 16 ರನ್ ಗೆ 2 ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಯಿತು. ಆದರೆ ನಾಯಕ ಶುಭಮನ್ ಗಿಲ್ ಮತ್ತು ವಾಷಿಂಗ್ಟನ್ ಸುಂದರ್ ಮೂರನೇ ವಿಕೆಟ್ ಗೆ 90 ರನ್ ಜೊತೆಯಾಟದಿಂದ ಗೆಲುವು ಖಚಿತಪಡಿಸಿದರು.

ಗಿಲ್ 43 ಎಸೆತಗಳಲ್ಲಿ 9 ಬೌಂಡರಿ ಸೇರಿದಂತೆ 61 ರನ್ ಬಾರಿಸಿ ಔಟಾಗದೇ ಉಳಿದರೆ, ವಾಷಿಂಗ್ಟನ್ ಸುಂದರ್ 29 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ49 ರನ್ ಬಾರಿಸಿದ್ದಾಗ ಔಟಾಗಿ 1 ರನ್ ನಿಂದ ಅರ್ಧಶತಕ ವಂಚಿತರಾದರು. ಇಂಪ್ಯಾಕ್ಟ್ ಪ್ಲಾಯೆರ್ ಆಗಿ ಕಣಕ್ಕೆ ಇಳಿದ ಶೆರ್ಫಾನಿ ರುದರ್ಫೋಡ್ 16 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 35 ರನ್ ಗಳಿಸಿದರು.

ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಮೊಹಮದ್ ಸಿರಾಜ್ ದಾಳಿಗೆ ನಲುಗಿ ಹೋಯಿತು. ಒಬ್ಬನೇ ಒಬ್ಬ ಬ್ಯಾಟ್ಸ್ ಮನ್ ಅರ್ಧಶತಕ ದಾಖಲಿಸಲಿಲ್ಲ. ಸಿರಾಜ್ ಜೀವನಶ್ರೇಷ್ಠ ದಾಳಿ ನಡೆಸಿ 4 ವಿಕೆಟ್ ಪಡೆದು ಮಿಂಚಿದರು.

ನಿತಿಶ್ ಕುಮಾರ್ ರೆಡ್ಡಿ (31), ಹೆನ್ರಿಚ್ ಕ್ಲಾಸೆನ್ (27), ಪ್ಯಾಟ್ ಕಮಿನ್ಸ್ (22) ಮತ್ತು ಇಶಾನ್ ಕಿಶನ್ (17) ತಕ್ಕಮಟ್ಟಿಗೆ ಪ್ರದರ್ಶನ ನೀಡಿ ತಂಡ ಸಾಧಾರಣ ಮೊತ್ತ ದಾಖಲಿಸಲು ನೆರವಾದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments