Tuesday, May 19, 2026
Google search engine
Homeರಾಜ್ಯನಮ್ಮ ಅನ್ನದ ತಟ್ಟೆಗೆ ಕೈ ಹಾಕಿದರೆ ಕೈ ಕತ್ತರಿಸುತ್ತೇವೆ: ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಎಚ್ಚರಿಕೆ

ನಮ್ಮ ಅನ್ನದ ತಟ್ಟೆಗೆ ಕೈ ಹಾಕಿದರೆ ಕೈ ಕತ್ತರಿಸುತ್ತೇವೆ: ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಎಚ್ಚರಿಕೆ

ಜಯಮೃತ್ಯುಂಜಯ ಸ್ವಾಮೀಜಿ ಹೋರಾಟವನ್ನ ಖಂಡಿಸುತ್ತಿದ್ದೇವೆ. ನಮ್ಮ ಅನ್ನದ ತಟ್ಟೆಗೆ ಕೈ ಹಾಕಿದ್ರೆ ಕೈ ಕತ್ತರಿಸುತ್ತೇವೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ಎಚ್ಚರಿಸಿದ್ದಾರೆ.

ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟ ವಿಚಾರ ಸಂಬಂಧ ಮೈಸೂರಿನಲ್ಲಿ ಶನಿವಾರ ನಡೆದ ಹಿಂದುಳಿದ ಸಮುದಾಯಗಳಿಂದ ದುಂಡುಮೇಜಿನ ಸಭೆಯಲ್ಲಿ ಮಾದ್ಯಮಗಳ ಜತೆ ಮಾತನಾಡಿದ ಅವರು, ಸ್ವಾಮೀಜಿ ರಾಜಕೀಯ ಪುಡಾರಿ ರೀತಿ ನಡೆದುಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಬಗ್ಗೆ ಅವಹೇಳನಾವಾಗಿ ಮಾತನಾಡಿದ್ದಾರೆ.

ನೀವು ಸನ್ಯಾಸಿಯಾಗಿ ಒಂದು ಜಾತಿ ಪರವಾಗಿ ಕೆಲಸ ಮಾಡುವವರು ಸ್ವಾಮೀಜಿಯಾಗಲು ನಾಲಾಯಕ್. ಖಾವಿ ಬಟ್ಟೆ ಬಿಚ್ವಿಟ್ಟು ಬನ್ನಿ. ಖಾವಿ ಬಟ್ಟೆಗೆ ನಾವು ಗೌರವ ಕೊಡುತ್ತಿದ್ದೇವೆ ಅದನ್ನು ಉಳಿಸಿಕೊಳ್ಳಿ ಎಂದರು.

ಈ ವಿಚಾರ ಸುಪ್ರೀಂಕೋರ್ಟ್ ನ್ನಲ್ಲಿದೆ. ಸ್ವಾಮೀಜಿಯಾಗಿ ಹಿಂಸಾಚಾರಕ್ಕೆ ಕುಮ್ಮಕ್ಕು ಕೊಡ್ತಾ ಇದ್ದೀರಿ. ಇದೇನಾ ನಿಮ್ಮ ರೀತಿ ನೀತಿ. ಹಿಂದುಳಿದ ವರ್ಗಗಳು ವೀರಶೈವರು, ಲಿಂಗಾಯತರು ಒಂದಾಗಿ ಇದ್ದೀವಿ. ನಮ್ಮಗಳ ಮಧ್ಯೆ ಜಗಳ ತಂದು ಹಾಕ್ತಾ ಇದ್ದೀರಿ. ಜಯ ಮೃತ್ಯುಂಜಯ ಸ್ವಾಮಿ ಬಿಜೆಪಿ ಏಜೆಂಟ್ ರೀತಿ ಕೆಲಸ ಮಾಡುತ್ತಿದ್ದಾರೆ.  ಸಿದ್ದರಾಮಯ್ಯರನ್ನು ಕೆಳಗಿಳಿಸಲು ಸುಫಾರಿ ಪಡೆದುಕೊಂಡಿದ್ದಾರೆ. ನಮ್ಮ ಅನ್ನದ ತಟ್ಟೆಗೆ ಕೈ ಹಾಕಿದ್ರೆ ಕೈ ಕತ್ತರಿಸುತ್ತೇವೆ ಎಂದು ಕೆ.ಎಸ್. ಶಿವರಾಮು ವಾಗ್ದಾಳಿ ನಡೆಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments