Thursday, June 18, 2026
Google search engine
Homeರಾಜ್ಯಮೇಲ್ಮನೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ `ಪಂಚ’ ಕಜ್ಜಾಯ; ಬಿಜೆಪಿ, ಜೆಡಿಎಸ್ ನಿಂದ ಅಡ್ಡ ಮತದಾನ!

ಮೇಲ್ಮನೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ `ಪಂಚ’ ಕಜ್ಜಾಯ; ಬಿಜೆಪಿ, ಜೆಡಿಎಸ್ ನಿಂದ ಅಡ್ಡ ಮತದಾನ!

ವಿಧಾನಪರಿಷತ್ ನ 7 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನ 5 ಅಭ್ಯರ್ಥಿಗಳು ಜಯಭೇರಿ ಬಾರಿಸಿ ಮೇಲುಗೈ ಸಾಧಿಸಿದರೆ, ಬಿಜೆಪಿಯ ಇಬ್ಬರು ಸ್ಥಾನ ಉಳಿಸಿಕೊಂಡರೆ, ಜೆಡಿಎಸ್ ಶೂನ್ಯ ಸಾಧನೆಯೊಂದಿಗೆ ಆಘಾತಕ್ಕೆ ಒಳಗಾಗಿದೆ.

ವಿಧಾನಸಭೆಯಲ್ಲಿ ಗುರುವಾರ ನಡೆದ ಮತದಾನದಲ್ಲಿ ಎಲ್ಲಾ 222 ಶಾಸಕರು ಪಾಲ್ಗೊಳ್ಳುವ ಮೂಲಕ ಶೇ.100ರಷ್ಟು ಮತದಾನವಾಯಿತು. ಸಂಜೆ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಹೆಚ್ಚುವರಿಯಾಗಿ ಕಣಕ್ಕಿಳಿಸಿದ್ದ ಒಬ್ಬ ಅಭ್ಯರ್ಥಿ ಸೇರಿದಂತೆ 5 ಸ್ಥಾನಗಳನ್ನೂ ಗೆದ್ದು ಜಯಭೇರಿ ಬಾರಿಸಿದೆ.

ಕಾಂಗ್ರೆಸ್ ಗೆ ಹೆಚ್ಚುವರಿಯಾಗಿ 11 ಮತಗಳು ಬಿದ್ದಿದ್ದು, ಬಿಜೆಪಿಯಿಂದ 7 ಹಾಗೂ ಜೆಡಿಎಸ್ ನಿಂದ 4 ಮತಗಳು ಕಾಂಗ್ರೆಸ್ ಪಾಲಾಗಿವೆ ಎಂದು ಹೇಳಲಾಗಿದೆ. ಬಿಜೆಪಿಯ ಸೋಮಶೇಖರ್, ಶಿವರಾಮ್ ಹೆಬ್ಬಾರ್ ಬಹಿರಂಗವಾಗಿಯೇ ಕಾಂಗ್ರೆಸ್ ಗೆ ಮತ ಹಾಕಿರುವುದಾಗಿ ಘೋಷಿಸಿದರು.

ಬಿ.ಕೆ. ಹರಿಪ್ರಸಾದ್, ಟಿಪ್ಪಣ್ಣಪ್ಪ ಕಮಕನೂರ್, ಪಿ.ವಿ. ಮೋಹನ್, ಶಿವಣ್ಣ ಮಲ್ಲವಳ್ಳಿ ಮತ್ತು ವಿನಯ್ ಕಾರ್ತಿಕ್ ಜಯಭೇರಿ ಬಾರಿಸಿದರು. ಬಿಜೆಪಿಯ  ರಘು ಕೌಟಿಲ್ಯ ಮತ್ತು ಲಿಂಗರಾಜ್ ಪಾಟೀಲ್ ಗೆಲುವು ಕಂಡರೆ, ಜೆಡಿಎಸ್ ನ ಗೋವಿಂದರಾಜ್ 14 ಮತದೊಂದಿಗೆ ಸೋಲುಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ರಘು ಅವರ ಮತ ಅಸಿಂಧು ಆಗಿದೆ.

ವಿಧಾನಪರಿಷತ್ 8 ಅಭ್ಯರ್ಥಿಗಳು ಪಡೆದ ಮತ

ಕಾಂಗ್ರೆಸ್

  1. ಬಿಕೆ ಹರಿಪ್ರಸಾದ್- 30 ಮತಗಳು
  2. ಪಿವಿ ಮೋಹನ್ – 29 ಮತಗಳು
  3. ಬಿಎಸ್ ಶಿವಣ್ಣ- 30 ಮತಗಳು
  4. ತಿಪ್ಪಣಪ್ಪ ಕಮಕನೂರ- 30 ಮತಗಳು
  5. ವಿನಯ್ ಕಾರ್ತಿಕ್- 32 ಮತಗಳು

ಬಿಜೆಪಿ

  1. ರಘು ಕೌಟಿಲ್ಯ- 29 ಮತಗಳು
  2. ಲಿಂಗರಾಜ ಪಾಟೀಲ್ 27 ಮತಗಳು

ಜೆಡಿಎಸ್

  1. ಗೋವಿಂದರಾಜು-14 ಮತಗಳು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments