Tuesday, August 11, 2026
Google search engine
Homeದೇಶ1638 ಕ್ರೆಡಿಟ್‌ ಕಾರ್ಡ್‌ ಹೊಂದಿರುವ ಭಾರತೀಯನಿಂದ ವಿಶ್ವದಾಖಲೆ!

1638 ಕ್ರೆಡಿಟ್‌ ಕಾರ್ಡ್‌ ಹೊಂದಿರುವ ಭಾರತೀಯನಿಂದ ವಿಶ್ವದಾಖಲೆ!

ಕ್ರೆಡಿಟ್‌ ಕಾರ್ಡ್‌ ಅಂದರೆ ಹಣವಿಲ್ಲದೇ ಇದ್ದಾಗ ಸಾಲದ ರೂಪದಲ್ಲಿ ಬಳಸಬಹುದಾದ ಹಣದ ವ್ಯವಸ್ಥೆ ಎಂದೇ ಎಲ್ಲರೂ ನಂಬಿದ್ದಾರೆ. ಆದರೆ ಇಲ್ಲೊಬ್ಬ ಭಾರತೀಯ ಮೂಲದ ವ್ಯಕ್ತಿ ದಾಖಲೆ ಸಂಖ್ಯೆಯ ಕ್ರೆಡಿಟ್‌ ಕಾರ್ಡ್‌ ಹೊಂದಿದ್ದೂ ಅಲ್ಲದೇ ಅದನ್ನೇ ಆದಾಯದ ಮೂಲಕ ವಿಶ್ವದಾಖಲೆ ಮಾಡಿದ್ದಾರೆ.

ಭಾರತೀಯ ಮೂಲದ ಮನೀಷ್‌ ಧಮೇಜಾ 1638 ಕ್ರೆಡಿಟ್‌ ಕಾರ್ಡ್‌ ಗಳನ್ನು ಹೊಂದಿದ್ದು, ಈ ಕಾರ್ಡ್‌ ಗಳನ್ನು ಸಂಗ್ರಹಿಸಿದ್ದೂ ಮಾತ್ರವಲ್ಲ, ಕ್ರೆಡಿಟ್‌ ಗಳ ಮೂಲಕ ರಿವಾರ್ಡ್‌ ಪಾಯಿಂಟ್ಸ್‌, ಕ್ಯಾಶ್‌ ಬ್ಯಾಕ್‌, ಪ್ರವಾಸಿ ಸೌಲಭ್ಯ ಮತ್ತು ಹೋಟೆಲ್‌ ಗಳ ಸೇವೆ ಸೇರಿದಂತೆ ವಿವಿಧ ಆಫರ್‌ ಗಳ ಲಾಭ ಪಡೆಯುತ್ತಿದ್ದಾರೆ. ವಿಶೇಷ ಅಂದರೆ ಯಾವುದೇ ಸಾಲ ಇಲ್ಲದೇ ಈ ಸೌಲಭ್ಯಗಳನ್ನು ಪಡೆದು ಲಾಭಕರ ಮಾಡಿಕೊಂಡಿದ್ದಾರೆ.

ಕ್ರೆಡಿಟ್‌ ಕಾರ್ಡ್‌ ಬಳಸಿ ಅದನ್ನು ಆದಾಯದ ಮೂಲವಾಗಿಯೂ ಬಳಸಿಕೊಳ್ಳಬಹುದು ಎಂದು ಮನೀಷ್‌ ತೋರಿಸಿಕೊಟ್ಟಿದ್ದಾರೆ. ಈ ಮೂಲಕ 2021 ಏಪ್ರಿಲ್‌ 30ರಂದು ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ.

ವಿಶ್ವದಾಖಲೆ ಬಗ್ಗೆ ಪ್ರತಿಕ್ರಿಯಿಸಿದ ಮನೀಷ್‌, ಕ್ರೆಡಿಟ್‌ ಕಾರ್ಡ್‌ ಇಲ್ಲದೇ ನಾನು ಜೀವಿಸಲು ಸಾಧ್ಯವೇ ಇಲ್ಲ ಎಂಬ ಸ್ಥಿತಿಯಲ್ಲಿ ನಾನಿದ್ದೇನೆ. ನಾನು ಪ್ರಯಾಣಿಸುವಾಗಲೆಲ್ಲಾ ಅಂದರೆ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣ, ಆಹಾರ, ಸ್ಪಾ, ಹೋಟೆಲ್‌ ವೋಚರ್ಸ್‌, ಶಾಪಿಂಗ್‌ ವೋಚರ್ಸ್‌ ಸೇರಿದಂತೆ ಎಲ್ಲಾ ಕಡೆ ಬಳಸಿದ್ದೇನೆ ಎಂದಿದ್ದಾರೆ.

2016ರಲ್ಲಿ ಭಾರತದಲ್ಲಿ ನೋಟ್‌ ಅಮಾನೀಕರಣಗೊಂಡ ಘಟನೆಯನ್ನು ಮೆಲುಕು ಹಾಕಿರುವ ಮನೀಷ್‌, 500 ಮತ್ತು 1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿದಾಗ ಜನರು ಆಘಾತಕ್ಕೆ ಒಳಗಾದರು. ಹಣಕ್ಕಾಗಿ ಜನರು ಎಟಿಎಂಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದರು. ಆಗ ನನಗೆ ನೆರವಿಗೆ ಬಂದಿದ್ದು ಕ್ರೆಡಿಟ್‌ ಕಾರ್ಡ್‌. ನಾನು ಕ್ರೆಡಿಟ್‌ ಕಾರ್ಡ್‌ ಬಳಸಿ ಡಿಜಿಟಲ್‌ ಮೂಲಕ ಹಣ ಸಂದಾಯ ಮಾಡುತ್ತಿದ್ದೆ ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments