ಮುಂಬರುವ ವನಿತೆಯರ ವಿಶ್ವಕಪ್ ಏಕದಿನ ಟೂರ್ನಿಗೆ ಭಾರತ ತಂಡ ಪ್ರಕಟಿಸಲಾಗಿದ್ದು, ಹರ್ಮನ್ ಪ್ರೀತ್ ಕೌರ್ ನಾಯಕಿಯಾಗಿ ಮುಂದುವರಿದಿದ್ದಾರೆ.
ಬಿಸಿಸಿಐ ಆಯ್ಕೆ ಸಮಿತಿ ಸಭೆಯಲ್ಲಿ ಹರ್ಮನ್ ಪ್ರೀತ್ ಕೌರ್ ಜೊತೆ ಉಪ ನಾಯಕಿ ಸ್ಮೃತಿ ಮಂದಾನ ಕೂಡ ಉಪಸ್ಥಿತರಿದ್ದು, ತಂಡವನ್ನು ಅಂತಿಮಗೊಳಿಸಿದರು.
ತಂಡದ ಪ್ರಮುಖ ಆಟಗಾರ್ತಿ ಶೆಫಾಲಿ ವರ್ಮಾ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ವಿಫಲರಾಗಿದ್ದಾರೆ. ಯಶ್ತಿಕಾ ಭಾಟಿಯಾ ಮತ್ತು ರಿಚಾ ಘೋಷ್ ವಿಕೆಟ್ ಕೀಪರ್ಸ್ ಆಗಿ ಆಯ್ಕೆಯಾಗಿದ್ದಾರೆ.
ಭಾರತ ವನಿತೆಯರ ಏಕದಿನ ತಂಡ
ಹರ್ಮನ್ ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂದಾನ (ಉಪನಾಯಕಿ), ಪ್ರತಿಕಾ ರಾವಲ್, ಹರ್ಲನ್ ಡಿಯೊಲ್, ದೀಪ್ತಿ ಶರ್ಮ, ಜೆಮಿಹಾ ರೋಡ್ರಿಗಜ್, ರೇಣುಕಾ ಸಿಂಗ್ ಥಾಕೂರ್, ಅರುಂಧತಿ ರೆಡ್ಡಿ, ರಿಚಾ ಘೋಷ್, ಕ್ರಾಂತಿ ಗೌಡ್, ಅಮನ್ ಜೋತ್ ಕೌರ್, ರಾಧಾ ಯಾಧವ್, ಶ್ರೀ ಚರಣಿ, ಯಶ್ತಿಕಾ ಭಾಟಿಯಾ, ಸ್ನೇಹಾ ರಾಣ.



