Sunday, 8 November 2026 — Kannadavahini
BREAKING NEWS
ರಾಜಕೀಯ ಬಿಜೆಪಿ ಅಧಿಕಾರಕ್ಕೆ ಬಂದರೆ ಎಲ್ಲಾ ಗ್ಯಾರಂಟಿಗಳಿಗೆ ಕುತ್ತು: ಸಿಎಂ ಡಿ ಕೆ ಶಿವಕುಮಾರ್ ಅಪರಾಧ ದರೋಡೆ ಪ್ರಕರಣದಲ್ಲಿ ಶಾಸಕ ರಮೇಶ ಜಾರಕಿಹೊಳಿ ಗನ್‌ ಮ್ಯಾನ್: 2.39 ಕೋಟಿ ರೂ. ವಶ ರಾಜ್ಯ ಎಥೆನಾಲ್ ಮಿಶ್ರಣ ಕುರಿತು 67 ಕಡೆ ಪೆಟ್ರೋಲ್ ಮಾದರಿ ಸಂಗ್ರಹಿಸಿ ಪರಿಶೀಲನೆ: ಸಿಎಂ ಡಿಕೆ ಶಿವಕುಮಾರ್ ರಾಜ್ಯ ಕಬ್ಬು ಬೆಳೆಗಾರರ ಹೋರಾಟ ತಾತ್ಕಾಲಿಕ ವಾಪಸ್: ಸಕ್ಕರೆ ಕಾರ್ಖಾನೆಗಳ ಆರಂಭಕ್ಕೆ ಹಸಿರು ನಿಶಾನೆ ರಾಜ್ಯ ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರಿಂದ ಜೈಲ್ ಭರೋ ಹೋರಾಟ ತೀವ್ರ ಕಾನೂನು ವಶಕ್ಕೆ ಪಡೆದ ಕ್ಷಣದಿಂದಲೇ 24 ಗಂಟೆಗಳ ಗಡುವು ಆರಂಭ: ಸುಪ್ರೀಂ ಮಹತ್ವದ ತೀರ್ಪು ಕಾನೂನು ಬಿಜೆಪಿ ವಿರುದ್ಧ ಅಪಪ್ರಚಾರ: ಡಿಕೆಶಿ, ಸಿದ್ದರಾಮಯ್ಯಗೆ ಹೈಕೋರ್ಟ್ ಬಿಗ್ ರಿಲೀಫ್ ರಾಜ್ಯ ಕೆಪಿಎಸ್ ಸಿ ಹಗರಣ: ಎಸ್ ಐಟಿ ಮುಖ್ಯಸ್ಥರಾಗಿ ಹಿತೇಂದ್ರ ನೇಮಕ ರಾಜಕೀಯ ಬಿಜೆಪಿ ಅಧಿಕಾರಕ್ಕೆ ಬಂದರೆ ಎಲ್ಲಾ ಗ್ಯಾರಂಟಿಗಳಿಗೆ ಕುತ್ತು: ಸಿಎಂ ಡಿ ಕೆ ಶಿವಕುಮಾರ್ ಅಪರಾಧ ದರೋಡೆ ಪ್ರಕರಣದಲ್ಲಿ ಶಾಸಕ ರಮೇಶ ಜಾರಕಿಹೊಳಿ ಗನ್‌ ಮ್ಯಾನ್: 2.39 ಕೋಟಿ ರೂ. ವಶ ರಾಜ್ಯ ಎಥೆನಾಲ್ ಮಿಶ್ರಣ ಕುರಿತು 67 ಕಡೆ ಪೆಟ್ರೋಲ್ ಮಾದರಿ ಸಂಗ್ರಹಿಸಿ ಪರಿಶೀಲನೆ: ಸಿಎಂ ಡಿಕೆ ಶಿವಕುಮಾರ್ ರಾಜ್ಯ ಕಬ್ಬು ಬೆಳೆಗಾರರ ಹೋರಾಟ ತಾತ್ಕಾಲಿಕ ವಾಪಸ್: ಸಕ್ಕರೆ ಕಾರ್ಖಾನೆಗಳ ಆರಂಭಕ್ಕೆ ಹಸಿರು ನಿಶಾನೆ ರಾಜ್ಯ ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರಿಂದ ಜೈಲ್ ಭರೋ ಹೋರಾಟ ತೀವ್ರ ಕಾನೂನು ವಶಕ್ಕೆ ಪಡೆದ ಕ್ಷಣದಿಂದಲೇ 24 ಗಂಟೆಗಳ ಗಡುವು ಆರಂಭ: ಸುಪ್ರೀಂ ಮಹತ್ವದ ತೀರ್ಪು ಕಾನೂನು ಬಿಜೆಪಿ ವಿರುದ್ಧ ಅಪಪ್ರಚಾರ: ಡಿಕೆಶಿ, ಸಿದ್ದರಾಮಯ್ಯಗೆ ಹೈಕೋರ್ಟ್ ಬಿಗ್ ರಿಲೀಫ್ ರಾಜ್ಯ ಕೆಪಿಎಸ್ ಸಿ ಹಗರಣ: ಎಸ್ ಐಟಿ ಮುಖ್ಯಸ್ಥರಾಗಿ ಹಿತೇಂದ್ರ ನೇಮಕ
ರಾಜ್ಯ

ಬೆಂಗಳೂರಿನ 4 ಆಸ್ಪತ್ರೆಗಳ ಫಾರ್ಮಸಿ ಲೈಸೆನ್ಸ್ ರದ್ದು: 25 ಆಸ್ಪತ್ರೆಗೆ ನೋಟಿಸ್

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 11 ವೀಕ್ಷಣೆಗಳು
ut khader

ಬೆಂಗಳೂರು: ನಕಲಿ ಔಷಧಿಗಳನ್ನು ಪೂರೈಕೆ ಮಾಡಿಕೊಂಡಿದ್ದ ನಾಲ್ಕು ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳ ಫಾರ್ಮಸಿ ಲೈಸೆನ್ಸ್ ಅನ್ನು ವಿಶೇಷ ತನಿಖಾ ತಂಡ (ಎಸ್ ಐಟಿ) ಶಿಫಾರಸಿನ ಮೇರೆಗೆ ಔಷಧ ನಿಯಂತ್ರಣ ಇಲಾಖೆಯು ರದ್ದುಗೊಳಿಸಿದೆ.

ಅಲ್ಲದೆ, ನಕಲಿ ಔಷಧಿ ಪೂರೈಕೆಯಾಗಿರುವ ನಗರದ 25ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳಿಗೆ ಹಂತ-ಹಂತವಾಗಿ ನೋಟಿಸ್‌ ಜಾರಿಗೊಳಿಸಲು ಎಸ್‌ಐಟಿ ಮುಂದಾಗಿದೆ.

ತನಿಖಾ ತಂಡಕ್ಕೆ ಲಭ್ಯವಾಗಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ ನಗರದ ಅಂದಾಜು 70 ರಿಂದ 80 ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್‌ಗಳು ಹಾಗೂ ಮೆಡಿಕಲ್ ಸ್ಟೋರ್‌ಗಳಿಗೆ ಈ ನಕಲಿ ಔಷಧಿಗಳು ಪೂರೈಕೆಯಾಗಿರುವ ಶಂಕೆ ವ್ಯಕ್ತವಾಗಿದೆ.

ಲೈಸೆನ್ಸ್ ರದ್ದಾಗಿರುವ ನಾಲ್ಕು ಆಸ್ಪತ್ರೆಗಳ ಫಾರ್ಮಸಿಗಳಲ್ಲಿ ಔಷಧಿ ಮಾರಾಟ ಮಾಡದಂತೆ ಎಸ್‌ಐಟಿ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿ, ಅವುಗಳನ್ನು ಮುಚ್ಚಿಸಿದ್ದಾರೆ.

ನಕಲಿ ಔಷಧಿ ಪೂರೈಕೆಗೊಂಡಿರುವ ಎಲ್ಲಾ ಆಸ್ಪತ್ರೆಗಳ ಆಡಳಿತ ಮಂಡಳಿ ಹಾಗೂ ಫಾರ್ಮಸಿ ಮುಖ್ಯಸ್ಥರಿಗೆ ನೋಟಿಸ್‌ ನೀಡಿ ವಿಚಾರಣೆ ನಡೆಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

ನಗರದ ಮಿನರ್ವ ಸರ್ಕಲ್ ಬಳಿ ಇರುವ ‘ಕೃಪಾ ಹೆಲ್ತ್ ಕೇರ್’ ಮೇಲೆ ಕೆಲ ದಿನಗಳ ಹಿಂದೆ ಎಸ್‌ಐಟಿ ದಾಳಿ ನಡೆಸಿ ನಕಲಿ ಔಷಧಿ ಜಾಲವನ್ನು ಬಯಲಿಗೆಳೆದಿತ್ತು. ಈ ಕೃಪಾ ಹೆಲ್ತ್ ಕೇರ್‌ನಿಂದಲೇ ಹಲವು ಪ್ರತಿಷ್ಠಿತ ಫಾರ್ಮಸಿಗಳಿಗೆ ನಕಲಿ ಔಷಧಿ ಸರಬರಾಜಾಗಿತ್ತು ಎಂಬುದು ತನಿಖೆಯಲ್ಲಿ ಸಾಬೀತಾಗಿದೆ.

ಬನಶಂಕರಿ 2ನೇ ಹಂತದಲ್ಲಿರುವ ಪ್ರತಿಷ್ಠಿತ ಆಸ್ಪತ್ರೆಯ ಫಾರ್ಮಸಿಯು ಕೃಪಾ ಹೆಲ್ತ್ ಕೇರ್‌ನಿಂದ ಹೆಚ್ಚಿನ ಪ್ರಮಾಣದಲ್ಲಿ ನಕಲಿ ಔಷಧಿಗಳನ್ನು ಪಡೆದುಕೊಂಡಿರುವುದು ದೃಢಪಟ್ಟಿದೆ. ಔಷಧ ಮತ್ತು ಸೌಂದರ್ಯವರ್ಧಕ ಕಾಯ್ದೆಯ  ಉಲ್ಲಂಘನೆಯಡಿ ಈ ಫಾರ್ಮಸಿಯ ಪರವಾನಗಿಯನ್ನು ಡ್ರಗ್ ಕಂಟ್ರೋಲ್ ಇಲಾಖೆ ರದ್ದುಪಡಿಸಿದೆ.

ತನಿಖೆಯಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ನಕಲಿ ಝವಿಸೆಪ್ಟಾ ಪೂರೈಕೆ ಮಾಡಲಾಗಿದೆ. ಝವಿಸೆಫ್ತಾ ಗಂಭೀರ ಸೋಂಕುಗಳಿಗೆ ಬಳಸಲಾಗುವ ಪ್ರಮುಖ ಆ್ಯಂಟಿ ಬಯೋಟಿಕ್ ಔಷಧಿ ಪತ್ತೆಯಾಗಿದೆ.
2025 ರಿಂದ ಇಲ್ಲಿಯವರೆಗೆ, ಸತತ 8 ತಿಂಗಳುಗಳಿಂದ ಈ ನಕಲಿ ಆ್ಯಂಟಿಬಯೋಟಿಕ್ ಅನ್ನು ಸದರಿ ಫಾರ್ಮಸಿಗಳಲ್ಲಿ ನಿರಂತರವಾಗಿ ಮಾರಾಟ ಮಾಡಲಾಗಿದೆ.

ಈ ಅವಧಿಯಲ್ಲಿ ಐಸಿಯು ಮತ್ತು ಗಂಭೀರ ಆರೋಗ್ಯ ಸಮಸ್ಯೆಯಿಂದ ದಾಖಲಾಗಿದ್ದ ನೂರಾರು ರೋಗಿಗಳಿಗೆ ಇದೇ ನಕಲಿ ಔಷಧಿ ನೀಡಲಾಗಿದೆಯೇ ಎಂಬ ಭೀತಿ ಶುರುವಾಗಿದೆ. ಈ ಫಾರ್ಮಸಿಯಿಂದ ಇನ್ನಾವ ಆಸ್ಪತ್ರೆಗಳಿಗೆ, ಕ್ಲಿನಿಕ್‌ಗಳಿಗೆ ಹಾಗೂ ರೋಗಿಗಳಿಗೆ ಔಷಧ ವಿತರಣೆಯಾಗಿದೆ ಎಂಬ ಬಗ್ಗೆ ಎಸ್‌ಐಟಿ ತನಿಖೆ ತೀವ್ರಗೊಳಿಸಿದೆ.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8407 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment