ಆಫ್ಘಾನಿಸ್ತಾನದ ಸಚಿವಾಲಯದ ಮೇಲೆ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ತಾಲಿಬಾನ್ ಸರ್ಕಾರದ ನಿರಾಶ್ರಿತರ ಸಚಿವ ಖಲಿಲ್ ಉರ್-ರೆಹಮಾನ್ ಹಖಾನಿ ಮೃತಪಟ್ಟಿದ್ದಾರೆ.
ರಾಜಧಾನಿ ಕಾಬೂಲ್ ನಲ್ಲಿರುವ ಸಚಿವಾಲಯದ ಮೇಲೆ ಬಾಂಬ್ ದಾಳಿ ನಡೆದಿದ್ದು, ನಿರಾಶ್ರಿತರ ಸಚಿವಾಲಯದ ಕಚೇರಿ ಬಳಿ ಬಾಂಬ್ ಬಿದ್ದಿದ್ದರಿಂದ ಸಚಿವ ಹಾಗೂ ಅವರ ಸಹದ್ಯೋಗಿಗಳು ಮೃತಪಟ್ಟಿದ್ದಾರೆ.
ತಾಲಿಬಾನ್ ಸರ್ಕಾರದ ಪ್ರಮುಖ ಸಚಿವರಾಗಿದ್ದ ಖಲಿಲ್ ಉರ್ ರೆಹಮಾನ್ ಕೈಯಲ್ಲಿ ಸ್ವಯಂಚಾಲಿತ ಗನ್ ಇಲ್ಲದೇ ಹೊರಗೆ ಬರುತ್ತಿರಲಿಲ್ಲ. ಎರಡು ದಶಕಗಳ ಕಾಲ ಆಫ್ಘಾನಿಸ್ತಾನದಲ್ಲಿ ನಡೆದ ಅತ್ಯಂತ ಭೀಕರ ದಾಳಿಗಳ ಹಿಂದೆ ಹಖಾನಿ ಒಡೆತನದ ಹಕಾನಿ ನೆಟ್ ವರ್ಕ್ ಸಂಸ್ಥೆ ಪ್ರಮುಖ ಪಾತ್ರ ವಹಿಸಿತ್ತು.