ಬಹುತೇಕ ಶ್ರೀಮಂತರೇ ನೆಲೆಸಿದ್ದ ಲಾಸ್ ಏಂಜಲೀಸ್ ನಲ್ಲಿ ಮಹಾಮಾರಿಯಂತೆ ಕಾಡ್ಗಿಚ್ಚು ವ್ಯಾಪಿಸುತ್ತಲೇ ಇದ್ದು, ಸಾವಿನ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಅಮೆರಿಕ ಇತಿಹಾಸದಲ್ಲೇ ಅತ್ಯಂತ ಭೀಕರ ಎನ್ನಬಹುದಾದ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
ಲಾಸ್ ಏಂಜಲೀಸ್ ಕರಾವಳಿ ತೀರದಲ್ಲಿ ಮದೊಲ ಬಾರಿ ಕಾಣಿಸಿಕೊಂಡ ಕಾಡ್ಗಿಚ್ಚು ೫ ದಿನಗಳಾದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಇದರಿಂದ ಸುಮಾರು 12 ಸಾವಿರ ಕಟ್ಟಡಗಳು ಆಹುತಿಯಾಗಿದ್ದು, ಲಕ್ಷಾಂತರ ಜನ ಮನೆ ಮಠ ತೊರೆದು ಸುರಕ್ಷಿತ ಪ್ರದೇಶಗಳಿಗೆ ದೌಡಾಯಿಸಿದ್ದಾರೆ.
ಕಾಡ್ಗಿಚ್ಚಿನಿಂದ ಇಲ್ಲಿಯರೆಗೆ ಸುಮಾರು 150 ಶತಕೋಟಿ ಡಾಲರ್ ನಷ್ಟ ಉಂಟಾಗಿದೆ ಎಂದು ಅಂದಾಜಿಲಾಗಿದ್ದು, ಇದು ಅಮೆರಿಕ ಇತಿಹಾಸದಲ್ಲೇ ಅತೀ ಹೆಚ್ಚು ನಷ್ಟ ಉಂಟು ಮಾಡಿದ ಪ್ರಕೃತಿ ವಿಕೋಪವಾಗಿದೆ.
ಲಾಸ್ ಏಂಜಲೀಸ್ ಗವರ್ನರ್ ಬೆಂಕಿ ನಂದಿಸಲು ಬೇಕಾದ ಹೈಡ್ರೋಲಿಕ್ ಕೆಮಿಕಲ್ ಮುಕ್ತಾಯದ ಭೀತಿ ಎದುರಿಸುತ್ತಿದ್ದು, ನೂತನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡಲೇ ಅನಾಹುತದ ಸಮೀಕ್ಷೆ ನಡೆಸಲು ಸೂಚಿಸಬೇಕು ಹಾಗೂ ರಕ್ಷಣಾ ಕಾರ್ಯಗಳಿಗೆ ನೆರವು ನೀಡಬೇಕು ಎಂದು ಮನವಿ ಮಾಡಿದ್ದಾರೆ.