ಉಕ್ರೇನ್ ಮೇಲೆ ಯುದ್ಧ ಸಾರಿದ ನಂತರ ಇದೇ ಮೊದಲ ಬಾರಿಗೆ ಒಂದೇ ದಿನದಲ್ಲಿ ದಾಖಲೆ ಪ್ರಮಾಣದಲ್ಲಿ ರಷ್ಯಾ ಡ್ರೋಣ್ ದಾಳಿ ನಡೆಸಿದೆ.
ಫೆಬ್ರವರಿ 24, 2022ರಂದು ಉಕ್ರೇನ್ ಮೇಲೆ ಯುದ್ಧ ಆರಂಭಿಸಿದ ರಷ್ಯಾ 3ನೇ ವರ್ಷಾಚರಣೆ ದಿನ 267 ಡ್ರೋಣ್ ದಾಳಿ ನಡೆಸಿದೆ. ಇದು ಯುದ್ಧ ಪ್ರಾರಂಭಿಸಿದ ನಂತರ ಮಾಡಿದ ಅತೀ ಹೆಚ್ಚು ಡ್ರೋಣ್ ದಾಳಿಯಾಗಿದೆ.
https://twitter.com/MFA_Ukraine/status/1893616681932501268
ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದ ಶಾಂತಿ ಮಾತುಕತೆಯನ್ನು ಅಮೆರಿಕ ಮತ್ತು ರಷ್ಯಾ ಆರಂಭಿಸಿರುವ ನಡುವೆಯೇ ರಷ್ಯಾ ಭಾರೀ ಪ್ರಮಾಣದಲ್ಲಿ ದಾಳಿ ನಡೆಸಿರುವುದು ಕುತೂಹಲ ಮೂಡಿಸಿದೆ.
ಫೆಬ್ರವರಿ 23 ಭಾನುವಾರ ರಾಜಧಾನಿ ಕೀವ್, ಪೊಲ್ಟೋವಾ, ಸುಮಿ, ಚೆರ್ನಿವಿವ್, ಒಡೆಸಾ ಸೇರಿದಂತೆ ಉಕ್ರೇನ್ ನ 13 ಪ್ರದೇಶಗಳ ಮೇಲೆ ರಷ್ಯಾ 267 ಡ್ರೋಣ್ ದಾಳಿ ನಡೆಸಿದೆ.
267 ಡ್ರೋಣ್ ದಾಳಿಗಳ ಪೈಕಿ 138 ಡ್ರೋಣ್ ಗುರಿ ತಲುಪಿದ್ದು, 5 ಪ್ರದೇಶಗಳಲ್ಲಿ ಹಾನಿಯಾಗಿದೆ. 119 ಡ್ರೋಣ್ ಗಳನ್ನು ಜಾಮ್ ಮಾಡುವ ಯಾವುದೇ ಪ್ರಭಾವ ಬೀರದಂತೆ ನೋಡಿಕೊಳ್ಳಲಾಗಿದೆ ಎಂದು ಉಕ್ರೇನ್ ವಾಯುಪಡೆ ಹೇಳಿದೆ.


