Home ವಿದೇಶ ಉಕ್ರೇನ್ ಮೇಲೆ ರಷ್ಯಾ ಪ್ರಯೋಗಿಸಿದ ಕ್ಷಿಪಣಿ ಇತಿಹಾಸದಲ್ಲಿ ಇದೇ ಮೊದಲು!

ಉಕ್ರೇನ್ ಮೇಲೆ ರಷ್ಯಾ ಪ್ರಯೋಗಿಸಿದ ಕ್ಷಿಪಣಿ ಇತಿಹಾಸದಲ್ಲಿ ಇದೇ ಮೊದಲು!

by Editor
0 comments
russia

60 ವರ್ಷಗಳ ಹಿಂದೆ ಮೊದಲ ಬಾರಿ ಪ್ರಯೋಗ ನಡೆಸಿದ್ದ ಅತ್ಯಂತ ಅಪಾಯಕಾರಿ ಕ್ಷಿಪಣಿಯನ್ನು ಉಕ್ರೇನ್ ಮೇಲೆ ಬಳಸುವ ಮೂಲಕ ರಷ್ಯಾ ಇತಿಹಾಸದಲ್ಲೇ ಮೊದಲ ಬಾರಿ ಯುದ್ಧದಲ್ಲಿ ಬಳಸುವ ಮೂಲಕ ಎಚ್ಚರಿಕೆ ಸಂದೇಶ ರವಾನಿಸಿದೆ.

ಟಾರ್ಗೆಟೆಬಲ್ ರೀ-ಎಂಟ್ರಿ ವಾಹನ (ಗುರಿಯನ್ನು ಪುನರಾವರ್ತಿಸಿ ಮುನ್ನುಗ್ಗುವ ವಾಹನ) ಕ್ಷಿಪಣಿಯನ್ನು ಇದೇ ಮೊದಲ ಬಾರಿ ಬಳಸಲಾಗಿದ್ದು, ಯುದ್ಧದಲ್ಲಿ ಈ ರೀತಿಯ ತಂತ್ರಜ್ಞಾನ ಹೊಂದಿದ ಕ್ಷಿಪಣಿ ಬಳಸಲಾಗಿದ್ದು, ಇದು ತಲುಪಿದ ಗುರಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಧ್ವಂಸಗೊಳಿಸುತ್ತದೆ.

ಒಂದು ಬಾರಿ ಈ ಕ್ಷಿಪಣಿ ಸಿಡಿದ ನಂತರ ಬಾಹ್ಯಕಾಶದಲ್ಲಿ ರಾಕೆಟ್ ಉಡಾವಣೆ ರೀತಿ ಒಂದೊಂದು ಹಂತದಲ್ಲಿ ಬಿಡುಗಡೆ ಆಗುತ್ತದೆ. ಸುಮಾರು 1500 ಕಿ.ಮೀ. ವ್ಯಾಪ್ತಿಯಲ್ಲಿ ಪ್ರತಿ 150 ಕಿ.ಮೀ. ದೂರದಲ್ಲಿ ಒಂದೊಂದು ಸ್ಫೋಟಕಗಳು ಬಿದ್ದು ಸಾಮೂಹಿಕ ಅನಾಹುತ ಮಾಡುತ್ತದೆ.

1970ರಲ್ಲಿ ಮೊದಲ ಬಾರಿಗೆ ಈ ರೀತಿಯ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿತು. 1971ರಲ್ಲಿ ಸಬ್ ಮೇರಿನ್ ನಲ್ಲಿ ಬಳಸಲಾಯಿತು. ಇದರ ಬೆನ್ನಲ್ಲೇ ಸೋವಿಯತ್ ಒಕ್ಕೂಟ ಕೂಡ 1970ರಲ್ಲಿ ಈ ಕ್ಷಿಪಣಿ ಅಭಿವೃದ್ಧಿಪಡಿಸಿತು.

banner

ಅಮೆರಿಕ ಮತ್ತು ರಷ್ಯಾ ಇದುವರೆಗೆ 2692 ಬಾರಿ ಸಮೀಪ, ಮಧ್ಯಂತರ, ದೂರಗಾಮಿ ಸೇರಿದಂತೆ ವಿವಿಧ ಸ್ತರಗಳ  ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಿ ಪ್ರಯೋಗ ನಡೆಸಿದೆ. 2009ರಲ್ಲಿ ಅಮೆರಿಕ ಈ ಶಸ್ತ್ರಾಸ್ತ್ರ ಅಭಿವೃದ್ಧಿಯಿಂದ ಹಿಂದೆ ಸರಿದರೆ ರಷ್ಯಾ ಮುಂದುವರಿಸಿತು.

ಭಾರತ ಅಭಿವೃದ್ಧಿಪಡಿಸಿರುವ ಅಗ್ನಿ-5 ಕ್ಷಿಪಣಿ 5000 ಕಿ.ಮೀ. ದೂರದ ಸಾಮರ್ಥ್ಯ ಹೊಂದಿದ್ದು, ಇದು ಈಗ ಬಳಸಿರುವ ಕ್ಷಿಪಣಿಗೆ ಸರಿಸಮ ಎಂದು ಹೇಳಲಾಗಿದ್ದರೂ ಇದು ಒಂದೇ ಬಾರಿಗೆ ಹಲವು ಕಡೆ ದಾಳಿ ನಡೆಸುವ ರೀತಿ ಅಗ್ನಿ-5 ಇಲ್ಲ ಎಂದು ವಿಶ್ಲೇಷಿಸಲಾಗಿದೆ.

ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ 1000 ದಿನಗಳನ್ನು ಪೂರೈಸಿದ ಬೆನ್ನಲ್ಲೇ ಎರಡೂ ದೇಶಗಳು ಖಂಡಾಂತರ ಕ್ಷಿಪಣಿಗಳನ್ನು ಮೊದಲ ಬಾರಿ ಬಳಸಿದೆ. ಬುಧವಾರ ಉಕ್ರೇನ್ ಅಮೆರಿಕ ನೀಡಿದ್ದ 6 ಕ್ಷಿಪಣಿಗಳನ್ನು ಬಳಸಿದರೆ ಇದೇ ಮೊದಲ ಬಾರಿ ರಷ್ಯಾ ಐಸಿಬಿಎಂ ಖಂಡಾಂತರ ಕ್ಷಿಪಣಿ ದಾಳಿ ನಡೆಸಿದೆ.

ಗುರುವಾರ ಬೆಳಿಗ್ಗೆ ಉಕ್ರೇನ್ ನ ಡಿನಿಪ್ರೊ ನಗರದ ಮೇಲೆ ರಷ್ಯಾದ ಖಂಡಾಂತರ ಕ್ಷಿಪಣಿ ಬಂದು ಬಿದ್ದಿದೆ ಎಂದು ಉಕ್ರೇನ್ ಸೇನೆ ದೃಢಪಡಿಸಿದೆ. ಒಂದು ಕ್ಷಿಪಣಿ ಸಿಡಿಸಿದರೆ ಇದು ಹತ್ತಾರು ಕಡೆ ಬೇರ್ಪಟ್ಟು ಹಲವು ಕಡೆ ಏಕಕಾಲದಲ್ಲಿ ದಾಳಿ ಮಾಡಿ ಸಂಪೂರ್ಣ ಮೂಲಭೂತ ಸೌಕರ್ಯಗಳನ್ನು ಧ್ವಂಸಗೊಳಿಸುತ್ತದೆ.

ರಷ್ಯಾದ ಆರ್ ಎಸ್-26 ರುಬೆಜ್ ಹೆಸರಿನ ಅಂತರ್ ಖಂಡಾಂತರ ಕ್ಷಿಪಣಿಯನ್ನು ಬಳಸಲಾಗಿದ್ದು ಇದು ಗರಿಷ್ಠ 5800 ಕಿ.ಮೀ. ದೂರದ ಗುರಿ ತಲುಪುವ ಸಾಮರ್ಥ್ಯದ್ದಾಗಿದೆ.  ರಷ್ಯಾ ಪರಮಾಣು ಸಿಡಿತಲೆ ಬಳಸದೇ ಈ ಕ್ಷಿಪಣಿ ಬಳಸಿದ್ದು, ಇದು 5000 ಕಿ.ಮೀ. ದೂರದ ಡಿನಿಪ್ರೊ ನಗರದ ಮೇಲೆ ಅಪ್ಪಳಿಳಿಸಿದೆ.

ಆರ್ ಎಸ್-26 ಕ್ಷಿಪಣಿಯನ್ನು ಮೊದಲ ಬಾರಿ 2012ಲ್ಲಿ ಪರೀಕ್ಷೆಗೊಳಪಡಿಸಲಾಗಿತ್ತು. 12 ಮೀಟರ್ ಉದ್ದ ಹಾಗೂ ೩೬ ಟನ್ ತೂಕ ಹೊಂದಿದೆ. ಈ ಕ್ಷಿಪಣಿ ಜೊತೆ ರಷ್ಯಾ ಕಿನ್ಜಾಲ್ ಹೈಪರ್ ಸಾನಿಕ್ ಕೆಎಚ್-101 ಕ್ರೂಸರ್ ಕ್ಷಿಪಣಿಗಳನ್ನು ಉಡಾಯಿಸಲು ಸಿದ್ಧತೆ ನಡೆಸಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ಚಿಕ್ಕಮಗಳೂರು: ಇಬ್ಬರು ಮಕ್ಕಳ ಎದುರೇ ಪ್ರಿಯಕರನಿಂದ ಕೊಲೆಯಾದ ಗೃಹಿಣಿ! ಬಂಡುಕೋರರ ವಶಕ್ಕೆ ಡಾಮಸ್ಕೊ: ಸಿರಿಯಾ ಅಧ್ಯಕ್ಷ ಅಸ್ಸಾದ್ ಪರಾರಿ! 2ನೇ ಟೆಸ್ಟ್: ಆಸ್ಟ್ರೇಲಿಯಾ 10 ವಿಕೆಟ್ ಜಯಭೇರಿ, ಸರಣಿ 1-1ರಿಂದ ಸಮ ಬಾಲಿವುಡ್ ಖ್ಯಾತ ನಿರ್ದೇಶಕ, ನಿರ್ಮಾಪಕ ಸುಭಾಷ್ ಘಾಯ್ ಆಸ್ಪತ್ರೆಗೆ ದಾಖಲು! ಶೋಕಾಸ್ ನೋಟಿಸ್‍ಗೆ ಯತ್ನಾಳ್ ಉತ್ತರ ಗಮನಿಸಿ ಮುಂದಿನ ನಿರ್ಧಾರ: ರಾಧಾಮೋಹನ್ ದಾಸ್ ಅಗ್ರವಾಲ್ ಕಿದ್ವಾಯಿಯಲ್ಲಿ ಒಂದೇ 24 ಲಕ್ಷ ಆರ್ ಟಿಪಿಸಿಆರ್ ಪರೀಕ್ಷೆ, 146 ಕೋಟಿ ಬಿಲ್: ಡಿಸಿಎಂ ಡಿಕೆ ಶಿವಕುಮಾರ್ ಶ್ರೀರಂಗ ಕುಡಿಯವ ನೀರು ಪೂರೈಸುವ ಯೋಜನೆ 2026ಕ್ಕೆ ಪೂರ್ಣ: ರಾಜ್ಯ ಸರ್ಕಾರ 2ನೇ ಟೆಸ್ಟ್: ಸೋಲಿನ ಸುಳಿಯಲ್ಲಿ ಭಾರತ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಬದಲಾವಣೆ ಇಲ್ಲ: ಬಿಜೆಪಿ ಕೋರ್ ಸಮಿತಿ ಸಭೆಯಲ್ಲಿ ತೀರ್ಮಾನ 2nd Test: ಆಸ್ಟ್ರೇಲಿಯಾಗೆ ಹೆಡ್ ಶತಕದ ಬಲ: ಭಾರತಕ್ಕೆ 157 ರನ್ ಹಿನ್ನಡೆ