ಬಾಹ್ಯಕಾಶ ನಿಲ್ದಾಣದಲ್ಲಿ ಸಿಲುಕಿರುವ ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಸೇರಿದಂತೆ ಗಗನಯಾತ್ರಿಗಳು ಹೊಸ ವರ್ಷದ ದಿನ ಒಂದೇ ಬಾರಿ 16 ಸೂರ್ಯೋದಯ ವೀಕ್ಷಿಸಿದ್ದಾರೆ.
2024 ಕೊನೆಯ ದಿನ 16 ದಿನ ಸೂರ್ಯೋದಯ ಹಾಗೂ 16 ಸೂರ್ಯಾಸ್ತಗಳನ್ನು ವೀಕ್ಷಿಸಿದ್ದೇವೆ ಎಂದು ಸುನೀತಾ ವಿಲಿಯಮ್ಸ್ ಹೇಳಿಕೊಂಡಿದ್ದಾರೆ ಎಂದು ನಾಸಾ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಹಂಚಿಕೊಂಡಿದೆ.
ಕಳೆದ ಜೂನ್ ನಲ್ಲಿ ಬೋಯಿಂಗ್ ಸ್ಟಾಲ್ ಲೇಖರ್ ಕ್ಷಿಪಣಿಯಲ್ಲಿ ಪ್ರಯಾಣಿಸಿ ಬಾಹ್ಯಕಾಶ ನಿಲ್ದಾಣಕ್ಕೆ ತೆರಳಿದ್ದ ಸುನೀತಾ ವಿಲಿಯಮ್ಸ್ ಹಾಗೂ ಸಿಬ್ಬಂದಿ ಕಳೆದ 6 ತಿಂಗಳಿಂದ ಭೂಮಿಗೆ ವಾಪಸು ಬರಲಾಗದೇ ಸಿಲುಕಿದ್ದಾರೆ. ನಾಸಾ ಅವರನ್ನು ಕರೆತರಲು ಪ್ರಯತ್ನಿಸಿದ್ದು, 9 ದಿನಗಳಲ್ಲಿ ವಾಪಸ್ ಕರೆತರುವ ಸಾಧ್ಯತೆ ಇದೆ.
ಸುನೀತಾ ವಿಲಿಯಮ್ಸ್ ದೀಪಾವಳಿ ಹಾಗೂ ಕ್ರಿಸ್ ಮಸ್ ಹಬ್ಬವನ್ನು ಅಂತಾರಾಷ್ಟ್ರೀಯ ಬಾಹ್ಯಕಾಶ ನಿಲ್ದಾಣದಲ್ಲೇ ಆಚರಿಸಿದ್ದಾರೆ.
https://twitter.com/Space_Station/status/1874066725152452748