ಸಿರಿಯಾ ರಾಜಧಾನಿ ಡಾಮಸ್ಕೊ ವಶಪಡಿಸಿಕೊಳ್ಳುವ ಮೂಲಕ ಬಂಡುಕೋರರು ಸಿರಿಯಾ ಮೇಲೆ ಅಧಿಪತ್ಯ ಸ್ಥಾಪಿಸುತ್ತಿದ್ದಂತೆ ಅಧ್ಯಕ್ಷ ಬಾಶರ್ ಅಲ್-ಅಸ್ಸಾದ್ ಪರಾರಿಯಾಗಿದ್ದಾರೆ.
ವಾರದ ಹಿಂದೆಯಷ್ಟೇ ದಾಳಿ ಆರಂಭಿಸಿದ್ದ ಬಂಡುಕೋರರು ಸಂಪೂರ್ಣ ಸಿರಿಯಾ ಮೇಲೆ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿರಿಯಾ ಅಧ್ಯಕ್ಷ ಅಸ್ಸಾದ್ ವಿಮಾನದ ಮೂಲಕ ಗೌಪ್ಯ ಸ್ಥಳಕ್ಕೆ ಪರಾರಿಯಾಗಿದ್ದಾರೆ. ಇದರೊಂದಿಗೆ ಅಸ್ಸಾದ್ ಅವರ 24 ವರ್ಷಗಳ ಆಡಳಿತ ಅಂತ್ಯಗೊಂಡಿದೆ.
ಬಂಡುಕೋರರು ಸಿರಿಯಾ ಅಸ್ಸಾದ್ ದೌರ್ಜನ್ಯದಿಂದ ಸ್ವತಂತ್ರಗೊಂಡಿದೆ ಎಂದು ಘೋಷಿಸಿದ್ದಾರೆ. ಮತ್ತೊಂದೆಡೆ ಪರಾರಿಯಾಗಿರುವ ಅಸ್ಸಾದ್ ಪಡೆಯಿಂದ ರಾಸಾಯನಿಕ ದಾಳಿ ನಡೆಯಬಹುದು ಎಂದು ಅಮೆರಿಕ ಆತಂಕ ವ್ಯಕ್ತಪಡಿಸಿದೆ.