ಚೀನಾದಲ್ಲಿ ಸೃಷ್ಟಿಯಾಗಿ ಜಗತ್ತನ್ನೇ ಅಲ್ಲೋಕಲ್ಲೋಲ ಮಾಡಿದ ಕೊರೊನಾ ವೈರಸ್ ಮಾದರಿಯ ಮತ್ತೊಂದು ಎಚ್ ಎಂಪಿವಿ ವೈರಸ್ ಏಷ್ಯಾದ ರಾಷ್ಟ್ರಗಳಲ್ಲಿ ಭೀತಿ ಸೃಷ್ಟಿಸಿದೆ.
ಚೀನಾದಲ್ಲಿ ಅತ್ಯಂತ ವೇಗವಾಗಿ ಹರುಡುತ್ತಿದ್ದ ಹ್ಯೂಮನ್ ಮೆಟಾಪೆನ್ಯೂಮೂವರ್ಸ್ [HMPV] ವೈರಸ್ ನಿಂದಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವವ ಸಂಖ್ಯೆ ಹೆಚ್ಚಾಗಿದೆ. ಇದೀಗ ಈ ವೈರಸ್ ಏಷ್ಯಾದ ಇತರೆ ದೇಶಗಳಿಗೂ ಹರಡುವ ಭೀತಿ ಉಂಟಾಗಿದೆ.
ಉತ್ತರ ಚೀನಾದಲ್ಲಿ ಅತ್ಯಂತ ಹೆಚ್ಚು ಹಾವಳಿ ಸೃಷ್ಟಿಸುತ್ತಿರುವ ಎಚ್ ಎಂಪಿವಿ ವೈರಸ್ ಭಾರೀ ಸಮಸ್ಯೆ ಸೃಷ್ಟಿಸಿದೆ ಎಂದು ಚೀನಾದ ಅಧಿಕಾರಿಗಳು ಹೇಳಿದ್ದಾರೆ.
ಹ್ಯೂಮನ್ ಮೆಟಾಪೆನ್ಯೂಮೂವರ್ಸ್ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಚೀನಾದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಹೇರಲಾಗಿದೆ ಎಂಬ ಸುದ್ದಿಗಳು ಕೇಳಿ ಬಂದಿವೆ. ಆದರೆ ಇದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.
ಅತ್ಯಂತ ಮಾರಕ ವೈರಸ್ ಗಳ ಉತ್ಪಾದನೆಯಲ್ಲಿ ಕುಖ್ಯಾತಿ ಪಡೆದಿರುವ ಚೀನಾದ ಲ್ಯಾಬ್ ನಲ್ಲಿ ಕೊರೊನಾ ವೈರಸ್ ಸೃಷ್ಟಿಯಾಗಿದ್ದು, ಇದು ಅದೇ ಮಾದರಿಯ ವೈರಸ್ ಆಗಿರಬಹುದೇ ಸಂಶಯ ಉಂಟಾಗಿದೆ.
ಹೊಸ ಹ್ಯೂಮನ್ ಮೆಟಾಪೆನ್ಯೂಮೂವರ್ಸ್ ವೈರಸ್ ನಿಂದ ಆಸ್ಪತ್ರೆ ತುಂಬಿ ಹೋಗಿದ್ದು, ಭಾರೀ ಪ್ರಮಾಣದಲ್ಲಿ ಸಾವು ಸಂಭವಿಸಿದೆ ಎಂದು ಹೇಳಲಾಗಿದೆ. ಆದರೆ ಚೀನಾ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸದ ಕಾರಣ ನಿಖರ ಮಾಹಿತಿ ಲಭ್ಯವಾಗುತ್ತಿಲ್ಲ.
ಚಳಿಗಾಲದಲ್ಲಿ ಕೆಲವು ಉಸಿರಾಟದ ಕಾಯಿಲೆಗಳ ಪ್ರಕರಣಗಳು ಹೆಚ್ಚಾಗುವ ನಿರೀಕ್ಷೆಯಿದೆ. ಚೀನಾದ ರೋಗ ನಿಯಂತ್ರಣ ಪ್ರಾಧಿಕಾರವು ನ್ಯುಮೋನಿಯಾ ಮೇಲ್ವಿಚಾರಣಾ ವ್ಯವಸ್ಥೆಯನ್ನು ನಡೆಸುತ್ತಿದೆ ಎಂದು ರಾಯಿಟರ್ಸ್ ವರದಿ ತಿಳಿಸಿದೆ.