ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ವಿಕೆಟ್ ಕೀಪರ್ ಜಿತೇಶ್ ಕುಮಾರ್ ಮುನ್ನಡೆಸಲಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕ್ಯಾಚ್ ಹಿಡಿಯುವಾಗ ನಾಯಕ ರಜತ್ ಪಟಿದಾರ್ ಕೈಗೆ ಗಾಯವಾಗಿದ್ದು, ಇನ್ನು ಗುಣಮುಖವಾಗದ ಕಾರಣ ಜಿತೇಶ್ ಕುಮಾರ್ ಗೆ ನಾಯಕತ್ವ ವಹಿಸಲಾಗಿದೆ.
ಲಕ್ನೋದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಜಿತೇಶ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಈಗಾಗಲೇ ಪ್ಲೇಆಫ್ ರೇಸ್ ನಿಂದ ಹೊರಬಿದ್ದಿರುವ ಸನ್ ರೈಸರ್ಸ್ ಹೈದರಾಬಾದ್ ಮೊದಲು ಬ್ಯಾಟ್ ಮಾಡಲಿದೆ.
ಐಪಿಎಲ್ ನಲ್ಲಿ ಪ್ರಸ್ತುತ ಭರ್ಜರಿ ಪ್ರದರ್ಶನ ನೀಡುತ್ತಿರುವ ಆರ್ ಸಿಬಿ ಅಂಕಪಟ್ಟಿಯಲ್ಲಿ 17 ಅಂಕದೊಂದಿಗೆ 2ನೇ ಸ್ಥಾನದಲ್ಲಿದ್ದು, ಲೀಗ್ ನಲ್ಲಿ 2ನೇ ಸ್ಥಾನದಲ್ಲೇ ಉಳಿಯಬೇಕಾದರೆ ಕೊನೆಯ ಎರಡು ಪಂದ್ಯಗಳು ಆರ್ ಸಿಬಿ ಪಾಲಿಗೆ ಮಹತ್ವದ್ದಾಗಿದೆ.
ಬೆಂಗಳೂರಿನಲ್ಲಿ ನಡೆಯಬೇಕಿದ್ದ ಈ ಪಂದ್ಯವನ್ನು ಮಳೆಯ ಕಾರಣ ಲಕ್ನೋಗೆ ಸ್ಥಳಾಂತರಿಸಲಾಗಿದ್ದು, ಕಳೆದ 6 ಪಂದ್ಯಗಳಲ್ಲಿ 188ರ ಸರಾಸರಿಯಲ್ಲಿ ರನ್ ಹರಿದು ಬಂದಿದ್ದು, ಬ್ಯಾಟಿಂಗ್ ಗೆ ಯೋಗ್ಯವಾಗಿದೆ ಎಂದು ಹೇಳಲಾಗಿದೆ.



