Thursday, September 19, 2024
Google search engine
Homeತಾಜಾ ಸುದ್ದಿಓವರ್ ಟೇಕ್ ಮಾಡಲು ಹೋಗಿ ಟೆಂಪೊಗೆ ಡಿಕ್ಕಿ ಹೊಡೆದ ಬಸ್: 10 ಸಾವು, 20 ಮಂದಿಗೆ...

ಓವರ್ ಟೇಕ್ ಮಾಡಲು ಹೋಗಿ ಟೆಂಪೊಗೆ ಡಿಕ್ಕಿ ಹೊಡೆದ ಬಸ್: 10 ಸಾವು, 20 ಮಂದಿಗೆ ಗಾಯ

ಓವರ್ ಟೇಕ್ ಮಾಡುವ ಆತುರದಲ್ಲಿ ಖಾಸಗಿ ಬಸ್ ಟೆಂಪೊಗೆ ಡಿಕ್ಕಿ ಹೊಡೆದಿದ್ದರಿಂದ 10 ಮಂದಿ ಪ್ರಯಾಣಿಕರು ಮೃತಪಟ್ಟು, 20 ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ಸಂಭವಿಸಿದೆ.

ಭಾನುವಾರ ಬೆಳಿಗ್ಗೆ ಬುಲಂದ್‌ಶಹರ್‌ ಸೇಲಂಪುರ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು, ಟೆಂಪೋದಲ್ಲಿ 25 ಜನರು ಪ್ರಯಾಣಿಸುತ್ತಿದ್ದು,  ಮೃತಪಟ್ಟವರಲ್ಲಿ ಬಹುತೇಕ ಮಂದಿ ಟೆಂಪೊದಲ್ಲಿ ಪ್ರಯಾಣಿಸುತ್ತಿದ್ದವರು ಎಂದು ಹೇಳಲಾಗಿದೆ.

ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಅಪಘಾತದಲ್ಲಿ ಟೆಂಪೋ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಬಸ್‌ನ ಮುಂಭಾಗವೂ ಜಖಂಗೊಂಡಿದೆ.

ಘಟನೆ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದ್ದು, ರಸ್ತೆ ತಡೆ ನಡೆಸಿದರು. ಅಪಘಾತಕ್ಕೆ ಕಾರಣ ಪೊಲೀಸರಿಂದ ಇನ್ನಷ್ಟೇ ತಿಳಿದು ಬರಬೇಕಿದೆ. ತನಿಖೆ ಪ್ರಾರಂಭಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments