Thursday, September 19, 2024
Google search engine
Homeತಾಜಾ ಸುದ್ದಿ5 ಹುದ್ದೆಗೆ 1000 ಅರ್ಜಿ: ಗುಜರಾತ್ ನಲ್ಲಿ ಸಂದರ್ಶನದ ವೇಳೆ ನೂಕುನುಗ್ಗಲು!

5 ಹುದ್ದೆಗೆ 1000 ಅರ್ಜಿ: ಗುಜರಾತ್ ನಲ್ಲಿ ಸಂದರ್ಶನದ ವೇಳೆ ನೂಕುನುಗ್ಗಲು!

ಖಾಸಗಿ ಕಂಪನಿಯೊಂದು 5 ಹುದ್ದೆಗಳಿಗೆ ಕರೆದಿದ್ದ ಸಂದರ್ಶನಕ್ಕೆ 1000ಕ್ಕೂ ಅಧಿಕ ಅಭ್ಯರ್ಥಿಗಳು ಮುಗಿಬಿದಿದ್ದರಿಂದ ನೂಕುನುಗ್ಗಲು ಉಂಟಾದ ಘಟನೆ ಗುಜರಾತ್ ನ ಅಂಕಲೇಶ್ವರದಲ್ಲಿ ನಡೆದಿದ್ದು, ಈ ವೀಡಿಯೋ ವೈರಲ್ ಆಗಿದೆ.

ಅಂಕಲೇಶ್ವರದ ಹೋಟೆಲೊಂದರಲ್ಲಿ ರಾಸಾಯನಿಕ ಉದ್ಯಮದ 5 ಹುದ್ದೆಗಳಿಗೆ ಗುರುವಾರ ನೇರ ಸಂದರ್ಶನ ಹಮ್ಮಿಕೊಂಡಿತ್ತು. ನಿರೀಕ್ಷೆಗಿಂತ ಭಾರೀ ಸಂಖ್ಯೆಯಲ್ಲಿ ಸಂದರ್ಶನಕ್ಕೆ ಪದವಿಧರರು ಮುಗಿಬಿದ್ದಿದ್ದರಿಂದ ನೂಕುನುಗ್ಗಲು ಉಂಟಾಗಿ ಕಾಲ್ತುಳಿತದ ಭೀತಿ ಉಂಟಾಗಿತ್ತು.

ಶಿಫ್ಟ್ ಇನ್‌ಚಾರ್ಜ್, ಪ್ಲಾಂಟ್ ಆಪರೇಟರ್, ಸೂಪರ್‌ವೈಸರ್, ಮೆಕ್ಯಾನಿಕಲ್ ಫಿಲ್ಟರ್ ಮತ್ತು ಎಕ್ಸಿಕ್ಯುಟಿವ್ ಹುದ್ದೆಗಳಿಗೆ ನೇರ ಸಂದರ್ಶನ ಕರೆಯಲಾಗಿದ್ದು, ಬಿಇ ಸೇರಿದಂತೆ ವಿವಿಧ ಪದವಿ ಪಡೆದ ಅಭ್ಯರ್ಥಿಗಳು ಉದ್ಯೋಗಕ್ಕಾಗಿ ಮುಗಿಬಿದ್ದಿದ್ದರು.

ಕಿಕ್ಕಿರಿದು ತುಂಬಿದ್ದ ಕಾರ್ಯಕ್ರಮದ ವೇಳೆ ಹೊಟೇಲ್‌ನ ರೇಲಿಂಗ್‌ ಒತ್ತಡಕ್ಕೆ ಸಿಲುಕಿ ಯುವಕನೊಬ್ಬ ಬಿದ್ದು ಪಕ್ಕದ ವಾಹನಗಳಿಗೆ ಹಾನಿಯಾಗಿದೆ. ಘಟನೆ ಬಗ್ಗೆ ಕಂಪನಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಕಾಂಗ್ರೆಸ್, ದೇಶದಲ್ಲಿ ನಿರುದ್ಯೋಗ ಸಮಸ್ಯೆ ಎಷ್ಟಿದೆ ಎಂಬುದಕ್ಕೆ ಇದು ಉತ್ತಮ ಉದಾಹರಣೆ ಆಗಿದೆ. ಗುಜರಾತ್ ಮಾದರಿ ನೋಡಬಹುದು ಎಂದು ಲೇವಡಿ ಮಾಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments