ಅಮೆರಿಕಾದ ಚಿಪ್ ತಯಾರಿಕಾ ದೈತ್ಯ ಕಂಪನಿ ಇಂಟೆಲ್ ಶೇ.15ರಷ್ಟು ಉದ್ಯೋಗ ಕಡಿತ ಮಾಡುವುದಾಗಿ ಘೋಷಿಸಿದೆ.
ಕಂಪನಿಯಲ್ಲಿ ಪ್ರಸ್ತುತ 1.50 ಲಕ್ಷ ಉದ್ಯೋಗಿಗಳಿದ್ದು ಪ್ರಸಕ್ತ ಸಾಲಿನಲ್ಲಿ 18,000 ಉದ್ಯೋಗಿಗಳನ್ನು ತೆಗೆದುಹಾಕಲಾಗುವುದು ಎಂದು ಹೇಳಿದೆ.
18 ಸಾವಿರ ಉದ್ಯೋಗ ಕಡಿತದಿಂದ ಕಂಪನಿಗೆ ವಾರ್ಷಿಕ 20 ದಶಲಕ್ಷ ಡಾಲರ್ ಉಳಿತಾಯವಾಗಲಿದೆ. ಈ ಮೂಲಕ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಲಾಗುವುದು ಎಂದು ಹೇಳಿದೆ.
ಎರಡನೇ ತ್ರೈಮಾಸಿಕದಲ್ಲಿ ನಾವು ನಿರೀಕ್ಷಿಸಿದ್ದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಬಿಸಿನೆಸ್ ಆಗಿಲ್ಲ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿಣ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಉದ್ಯೋಗ ಕಡಿತದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕಂಪನಿ ಹೇಳಿದೆ.