Friday, October 18, 2024
Google search engine
Homeತಾಜಾ ಸುದ್ದಿತೆಪ್ಪ ಮಗುಚಿ ನದಿಗೆ ಬಿದ್ದ ಅಂತ್ಯಕ್ರಿಯೆಗೆ ಹೊರಟ್ಟಿದ್ದ 20 ಮಂದಿ!

ತೆಪ್ಪ ಮಗುಚಿ ನದಿಗೆ ಬಿದ್ದ ಅಂತ್ಯಕ್ರಿಯೆಗೆ ಹೊರಟ್ಟಿದ್ದ 20 ಮಂದಿ!

ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಬೊಂಬು ಬಳಸಿ ನಿರ್ಮಿಸಿದ ತೆಪ್ಪದಲ್ಲಿ ನದಿ ದಾಟಲು ಯತ್ನಿಸುತ್ತಿದ್ದಾಗ ದೋಣಿ ಮಗುಚಿ 20 ಮಂದಿ ನದಿಗೆ ಬಿದ್ದ ಘಟನೆ ಬಿಹಾರದ ಪೂರ್ಣಿಯಾದಲ್ಲಿ ಸಂಭವಿಸಿದೆ.

ತುಂಬಿ ಹರಿಯತ್ತಿದ್ದ ನದಿ ದಾಟಲು ಸೇತುವೆ ಇಲ್ಲದ ಕಾರಣ ಸ್ಥಳೀಯರು ಬೊಂಬುಗಳನ್ನು ಬಳಸಿ ತಾವೇ ತೆಪ್ಪ ಮಾದರಿಯ ದೋಣಿ ನಿರ್ಮಿಸಿಕೊಂಡು ನದಿ ದಾಟಲು ಯತ್ನಿಸಿದಾಗ ಈ ಘಟನೆ ಸಂಭವಿಸಿದೆ. ಘಟನೆಯ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.

ಬೊಂಬು ತೆಪ್ಪದಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ 20 ಮಂದಿ ಪ್ರಯಾಣಿಸುತ್ತಿದ್ದರು. ನದಿ ಮಧ್ಯದಲ್ಲಿ ತೆಪ್ಪ ಸ್ವಲ್ಪ ಏರುಪೇರಾದಾಗ ನಿಯಂತ್ರಣ ಕಳೆದುಕೊಂಡ ಕೆಲವರು ನದಿಗೆ ಬಿದ್ದರು. ಈ ಸಂದರ್ಭದಲ್ಲಿ ತೆಪ್ಪ ವಾಲಿದ್ದರಿಂದ ಬಹುತೇಕ ಮಂದಿ ನದಿಗೆ ಬಿದ್ದಿದ್ದಾರೆ.

ನದಿಗೆ ಬಿದ್ದಾಗ ಎಲ್ಲರೂ ಜೋರಾಗಿ ಕೂಗಿಕೊಂಡಿದ್ದಾರೆ. ದಡದಲ್ಲಿದವರು ರಕ್ಷಣೆಗೆ ಧಾವಿಸಿದ್ದು, ನದಿಗೆ ಬಿದ್ದ ಎಲ್ಲರನ್ನೂ ರಕ್ಷಿಸಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments