Thursday, May 2, 2024
Google search engine
Homeಅಪರಾಧಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ವಿಷ ಹಾಕಿ ಪತ್ನಿ, ಇಬ್ಬರು ಮಕ್ಕಳ ಹತ್ಯೆಗೈದ ತಂದೆ!

ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ವಿಷ ಹಾಕಿ ಪತ್ನಿ, ಇಬ್ಬರು ಮಕ್ಕಳ ಹತ್ಯೆಗೈದ ತಂದೆ!

ಅನೈತಿಕ ಸಂಬಂಧ ಪ್ರಶ್ನೆ ಮಾಡಿದ್ದಕ್ಕಾಗಿ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ಕುಡಿಯುವ ನೀರಿನಲ್ಲಿ ವಿಷ ಹಾಕಿ ಪತಿ ಕೊಂದ ಆಘಾತಕಾರಿ ಘಟನೆ ಮಂಡ್ಯದಲ್ಲಿ ನಡೆದಿದೆ.

ಕೌಟುಂಬಿಕ ಕಲಹದಿಂದ ಮಹಿಳೆಯೊಬ್ಬರು ತಾನು ಹೆತ್ತ ಮೂರು ಮಕ್ಕಳಿಗೆ ವಿಷ ಉಣಿಸಿ ಕೊಲೆ ಮಾಡಿರುವ ಘಟನೆ ಬೆನ್ನಲ್ಲೇ ಇಂತಹದ್ದೇ ಮತ್ತೊಂದು ಘಟನೆ ಸಕ್ಕರೆ ನಾಡಿನ ನಾಗಮಂಗಲದಲ್ಲಿ ನಡೆದಿದೆ.

ನರಸಿಂಹ ಮನೆಯಲ್ಲಿನ ಕುಡಿಯುವ ನೀರಿಗೆ ವಿಷ ಬೆರೆಸಿ ಹೆಂಡತಿ ಹಾಗೂ ತನ್ನಿಬ್ಬರ ಮಕ್ಕಳಿಗೆ ಕುಡಿಸಿದ್ದಾನೆ. ಇದರಿಂದ ಪತ್ನಿ ಕೀರ್ತನಾ(23), ಮಕ್ಕಳಾದ ಜಯಸಿಂಹ (4), ರಿಷಿಕಾ (1) ಮೃತಪಟ್ಟಿದ್ದಾರೆ.

ನರಸಿಂಹ ಹಾಗೂ ಕೀರ್ತನಾ ಐದು ವರ್ಷದ ಹಿಂದೆ ಮದುವೆಯಾಗಿದ್ದು, ಈ ದಂಪತಿಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಗು ಇತ್ತು. ಸಂಸಾರ ಚೆನ್ನಾಗಿತ್ತು. ಆದ್ರೆ, ಕಟ್ಟಿಂಗ್ ಶಾಪ್ ಇಟ್ಟುಕೊಂಡಿದ್ದ ನರಸಿಂಹನಿಗೆ ಬೇರೆ ಅಕ್ರಮ ಸಂಬಂಧ ಇತ್ತು ಎಂದು ಹೆಂಡತಿ ಆರೋಪಿಸಿದ್ದಾಳೆ.

ಇದೇ ವಿಚಾರಕ್ಕೆ ಮನೆಯಲ್ಲಿ ಇಬ್ಬರ ನಡುವೆ ಪದೇ ಪದೇ ಗಲಾಟೆಯಾಗುತ್ತಲೇ ಇತ್ತು.ಬಳಿಕ ಸಿಟ್ಟಿನ ಕೈಗೆ ಬುದ್ಧಿ ಕೊಟ್ಟ ನರಸಿಂಹ, ಕುಡಿಯುವ ನೀರಿಗೆ ಕ್ರಿಮಿನಾಶಕ ಹಾಕಿದ್ದಾನೆ. ಬಳಿಕ ಆ ನೀರನ್ನು ತನ್ನಿಬ್ಬರು ಮಕ್ಕಳು ಮತ್ತು ಪತ್ನಿಗೆ ಕುಡಿಸಿದ್ದಾನೆ. ನಂತರ ತಾನೂ ಸಹ ಅದೇ ನೀರು ಸೇವಿಸಿದ್ದಾನೆ. ನಂತರ ತಾನು ಅದೇ ನೀರು ಕುಡಿದ ನರಸಿಂಹ ನೀರು ಕುಡಿದ ಕೆಲವೇ ಕ್ಷಣಗಳಲ್ಲಿ ಗಂಡ-ಹೆಂಡತಿ ಹಾಗೂ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಅಸ್ವಸ್ಥಗೊಂಡಿದ್ದಾರೆ.

ಬಳಿಕ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಎರೆಡು ಸಾವನ್ನಪ್ಪಿವೆ. ಇನ್ನು ಆಸ್ಪತ್ರೆಗೆ ಹೋದ ಬಳಿಕ ಪತ್ನಿ ಕೀರ್ತನಾ ಸಹ ಮೃತಪಟ್ಟಿದ್ದು, ಸದ್ಯ ನರಸಿಂಹಗೆ ನಾಗಮಂಗಲ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments