Thursday, September 19, 2024
Google search engine
Homeತಾಜಾ ಸುದ್ದಿಗುಜರಾತ್ ನಲ್ಲಿ 6 ಅಂತಸ್ತಿನ ಕಟ್ಟಡ ಕುಸಿದು 7 ಮಂದಿ ದುರ್ಮರಣ

ಗುಜರಾತ್ ನಲ್ಲಿ 6 ಅಂತಸ್ತಿನ ಕಟ್ಟಡ ಕುಸಿದು 7 ಮಂದಿ ದುರ್ಮರಣ

ಗುಜರಾತ್ ನ ವಾಣಿಜ್ಯ ನಗರಿ ಸೂರತ್ ನಲ್ಲಿ 6 ಅಂತಸ್ತಿನ ಕಟ್ಟಡ ಕುಸಿದುಬಿದ್ದು 6 ಮಂದಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ.

ಸಚಿನ್ ಜಿಐಡಿಸಿ ಪ್ರದೇಶದಲ್ಲಿ ಶನಿವಾರ ಸಂಜೆ ಈ ಘಟನೆ ಸಂಭವಿಸಿದ್ದು, ಘಟನಾ ಸ‍್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ದಳ ದೌಡಾಯಿಸಿದ್ದು, ರಾತ್ರಿಯಿಡಿ ಕಾರ್ಯಾಚರಣೆ ನಡೆಸಿ 7 ಮೃತದೇಹಗಳನ್ನು ಹೊರಗೆಳೆದಿದ್ದಾರೆ.

ಈ ಕಟ್ಟಡದಲ್ಲಿ ಬಾಡಿಗೆಗಾಗಿ ಸುಮಾರು 30 ಅಪಾರ್ಟ್ ಮೆಂಟ್ ಇದ್ದು, 5 ಕುಟುಂಬಗಳು ನೆಲೆಸಿದ್ದವು. ಈ ಕಟ್ಟಡವನ್ನು 2017ರಲ್ಲಿ ನಿರ್ಮಿಸಲಾಗಿದೆ.

ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಆವಶೇಷಗಳಡಿ ಇನ್ನೆಷ್ಟು ಜನ ಇದ್ದಾರೆ ಎಂಬುದು ತಿಳಿದಿಲ್ಲ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಕಟ್ಟಡ ಕುಸಿದಿದ್ದರಿಂದ ದೊಡ್ಡ ಕಾಂಕ್ರಿಟ್ ಗೋಡೆಗಳು ಮೇಲೆ ಇದ್ದಿದ್ದರಿಂದ ಅದನ್ನು ತೆಗೆಯುವುದು ಕಷ್ಟವಾಗಿತ್ತು. ನಿನ್ನೆ ಮಧ್ಯಾಹ್ನ 2.45ರ ಸುಮಾರಿಗೆ ಈ ಘಟನೆ ನಡೆದಿದ್ದು, ರಾತ್ರಿ ದೊಡ್ಡ ಸವಾಲುಗಳನ್ನು ನಿವಾರಿಸಲಾಯಿತು ಎಂದು ಅಧಿಕಾರಿ ವಿವರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments