Monday, May 27, 2024
Google search engine
Homeತಾಜಾ ಸುದ್ದಿಇಸ್ರೇಲ್ ಮೇಲೆ 24ಗಂಟೆಗಳಲ್ಲಿ ಇರಾನ್ ದಾಳಿ ಸಾಧ್ಯತೆ: ಅಮೆರಿಕದ ಯುದ್ಧ ನೌಕೆಗಳು ಸಜ್ಜು

ಇಸ್ರೇಲ್ ಮೇಲೆ 24ಗಂಟೆಗಳಲ್ಲಿ ಇರಾನ್ ದಾಳಿ ಸಾಧ್ಯತೆ: ಅಮೆರಿಕದ ಯುದ್ಧ ನೌಕೆಗಳು ಸಜ್ಜು

ಮುಂದಿನ 24 ಗಂಟೆಗಳಲ್ಲಿ ಯಾವುದೇ ಕ್ಷಣದಲ್ಲಿ ಇಸ್ರೇಲ್ ಮೇಲೆ ಇರಾನ್ ನೇರ ಮಾಡುವ ಸಾಧ್ಯತೆ ಇದ್ದು, ಅಮೆರಿಕ ಯುದ್ಧ ನೌಕೆಗಳು ಪರಿಸ್ಥಿತಿ ಎದುರಿಸಲು ಸಜ್ಜಾಗಿವೆ.

ಇರಾನ್ ರಾಯಭಾರ ಕಚೇರಿಯ ಡಮುಸ್ಕಾಸ್ ಪ್ರಾಂತ್ಯದ ಮೇಲೆ ಇಸ್ರೇಲ್ ದಾಳಿ ನಡೆಸಿದ್ದರಿಂದ ಒಬ್ಬ ಅಧಿಕಾರಿ ಮೃತಪಟ್ಟಿದ್ದ. ಈ ಹಿನ್ನೆಲೆಯಲ್ಲಿ ಇಸ್ರೇಲ್ ಮೇಲೆ ನೇರವಾಗಿ ದಾಳಿ ಮಾಡಲು ಇರಾನ್ ಸಿದ್ಧತೆ ನಡೆಸಿದೆ.

ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದ ಪರಿಣಾಮಗಳಿಗಾಗಿ ಇರಾನ್ ಕಾಯುತ್ತಿತ್ತು. ಆದರೆ ಎರಡೂ ದೇಶಗಳ ನಡುವಿನ ಯುದ್ಧ ಮುಗಿಯುವ ಸೂಚನೆ ದೊರೆಯದ ಕಾರಣ ಇರಾನ್ ಇಸ್ರೇಲ್ ಮೇಲೆ ದಾಳಿಗೆ ನಿರ್ಧರಿಸಿದೆ ಎಂದು ಹೇಳಲಾಗಿದೆ.

ಇಸ್ರೇಲ್ ಮೇಲೆ ಇರಾನ್ ದಾಳಿ ನಡೆಸಲು ಸಿದ್ಧತೆ ನಡೆಸಿರುವ ಬೆನ್ನಲ್ಲೇ ಅಮೆರಿಕ ಈ ವಲಯದಲ್ಲಿ ಯುದ್ಧ ನೌಕೆಗಳನ್ನು ಹೆಚ್ಚುವರಿಯಾಗಿ ಕಳುಹಿಸಿಕೊಡುವ ಮೂಲಕ ಪರಿಸ್ಥಿತಿ ಎದುರಿಸಲು ಸಜ್ಜಾಗಿವೆ.

ಅಮೆರಿಕ ಅಧ್ಯಕ್ಷ ಜೋ ಬಿಡೈನ್ ಇಸ್ರೇಲ್ ಮೇಲೆ ದಾಳಿ ನಡೆಯುವ ಸಾಧ್ಯತೆ ಇದೆ. ಆದರೆ ಯಾವಾಗ ಎಂದು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಈಗಲೇ ಆಗಬಹುದು ಅಥವಾ ತಡವಾಗಿ ಆಗಬಹುದು ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments