ದೇಶದ ನಾನಾ ಕಡೆ ಅಡಗಿದ್ದ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಶ್ನೋಯಿ ಗ್ಯಾಂಗ್ ಪರ ಕೆಲಸ ಮಾಡುತ್ತಿದ್ದ 7 ಶೂಟರ್ ಗಳನ್ನು ಬಂಧಿಸಲಾಗಿದೆ.
ಮಹಾರಾಷ್ಟ್ರ ಶಾಸಕ ಬಾಬಾ ಸಿದ್ದಿಕಿ ಹತ್ಯೆ ಮತ್ತು ಬಾಲಿವುಡ್ ನಟ ಸಲ್ಮಾನ್ ಖಾನ್ ಕೊಲೆ ಬೆದರಿಕೆ ಪ್ರಕರಣದ ಹಿನ್ನೆಲೆಯಲ್ಲಿ ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ದೆಹಲಿಯಲ್ಲಿ ಅಡಗಿದ್ದ ಲಾರೆನ್ಸ್ ಬಿಶ್ನೋಯಿ ಪರ ಕೆಲಸ ಮಾಡುತ್ತಿದ್ದ 7 ಶೂಟರ್ ಗಳನ್ನು ಬಂಧಿಸಲಾಗಿದೆ.
ದೆಹಲಿ ವಿಶೇಷ ಪೊಲೀಸ್ ಕಾರ್ಯಪಡೆ ಕಳೆದ 48 ಗಂಟೆಗಳಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 7 ಶೂಟರ್ ಗಳನ್ನು ಬಂಧಿಸಲಾಗಿದ್ದು, 6 ಸೆಮಿ ಆಟೋಮೆಟಿಕ್ ಮೆಷಿನ್ ಗನ್ ಸೇರಿದಂತೆ ಶಸ್ತ್ರಾಸ್ತ್ರ ಬಳಸುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕ್ಷತ್ರೀಯ ಕರ್ಣಿ ಸೇನಾ ಲಾರೆನ್ಸ್ ಬಿಶ್ನೋಯಿಯನ್ನು ಎನ್ ಕೌಂಟರ್ ಮಾಡಿ ಅಥವಾ ಬಂಧಿಸಿದರೆ 1.11 ಕೋಟಿ ರೂ. ಬಹುಮಾನ ಮೊತ್ತ ಘೋಷಿಸಿದ ಬೆನ್ನಲ್ಲೇ ಚುರುಕಾಗಿರುವ ಪೊಲೀಸರು ಲಾರೆನ್ಸ್ ಬಿಶ್ನೋಯಿ ಗ್ಯಾಂಗ್ ಮಟ್ಟಹಾಕಲು ಭರ್ಜರಿ ಕಾರ್ಯಾಚರಣೆ ಆರಂಭಿಸಿದೆ.