Wednesday, November 6, 2024
Google search engine
Homeತಾಜಾ ಸುದ್ದಿರತನ್ ಟಾಟಾ ಆಸ್ತಿಯಲ್ಲಿ ಅಡುಗೆ ಭಟ್ಟ, ಕೆಲಸಗಾರರಿಗೂ ಪಾಲು: 31 ವರ್ಷದ ಶಾಂತನು ನಾಯ್ಡುಗೆ 350...

ರತನ್ ಟಾಟಾ ಆಸ್ತಿಯಲ್ಲಿ ಅಡುಗೆ ಭಟ್ಟ, ಕೆಲಸಗಾರರಿಗೂ ಪಾಲು: 31 ವರ್ಷದ ಶಾಂತನು ನಾಯ್ಡುಗೆ 350 ಕೋಟಿ ಆಸ್ತಿ?

ದೇಶದ ಉದ್ಯಮ ಲೋಕದ ದಿಗ್ಗಜ ರತನ್ ಟಾಟಾ ನಿಧನದ ನಂತರ ಅವರ 10 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿ ಹಂಚಿಕೆ ಮಾಡಲಾಗಿದ್ದು, ಕುಟುಂಬದ ಸದಸ್ಯರು, ಆಪ್ತ ಶಾಂತನು ನಾಯ್ದು ಹಾಗೂ ಸಾಕುನಾಯಿಗೆ ಕೂಡ ಪಾಲು ನೀಡಲಾಗಿದೆ.

ರತನ್ ಟಾಟಾ ಇತ್ತೀಚೆಗಷ್ಟೇ ವಯೋಸಹಜ ಕಾಯಿಲೆಯಿಂದ 86ನೇ ವಯಸ್ಸಿಗೆ ನಿಧನರಾಗಿದ್ದರು. ಅವರ ಇಚ್ಛೆಯಂತೆ ಆಸ್ತಿ ಹಂಚಿಕೆ ಮಾಡಲಾಗಿದೆ.

ರತನ್ ಟಾಟಾ ಅವರ 10 ಸಾವಿರ ಕೋಟಿ ರೂ. ಆಸ್ತಿಯಲ್ಲಿ ಸೋದರ ಜಿಮ್ಮಿ ಟಾಟಾ, ಸೋದರ ಸಂಬಂಧಿ ಶಿರೀನ್ ಮತ್ತು ಡಿಯಾನಾ ಜೀಜೀಭಾಯ್, ಅಡುಗೆ ಭಟ್ಟ ಸುಬ್ಬಯ್ಯ, ಮನೆಯ ಕೆಲಸಗಾರರು, ಆಪ್ತ ಶಂತನು ನಾಯ್ದು, ಸಾಕುನಾಯಿಗೆ ಪಾಲು ನೀಡಿದ್ದಾರೆ.

ರತನ್ ಟಾಟಾ ಅವರನ್ನು ಕಳೆದ ಕೆಲವು ವರ್ಷಗಳಿಂದ ನೋಡಿಕೊಳ್ಳುತ್ತಿದ್ದ 31 ವರ್ಷದ ಶಂತನು ನಾಯ್ದುಗೆ ಮಹಾರಾಷ್ಟ್ರದ ಅಲಿಭಾಗ್ ನಲ್ಲಿರುವ 2000 ಚದರ ಅಡಿ ವಿಸ್ತೀರ್ಣದ ಬಂಗಲೆ, ಟಾಟಾ ಕಂಪನಿಯಲ್ಲಿ 0.83ರಷ್ಟು ಷೇರು, 350 ಕೋಟಿ ರೂ. ನಿಶ್ಚಿತ ಠೇವಣಿ, ಮುಂಬೈನ ಜುಹೂ ಟಾರಾ ರಸ್ತೆಯಲ್ಲಿರುವ ಎರಡಂಸ್ತಿನ ಮನೆಯನ್ನು ನೀಡಲಾಗಿದೆ.

ಸಾಕುನಾಯಿ `ಟಿಟೋ’ ಜೀವನಪೂರ್ತಿ ನಿರ್ವಹಣೆ ಮಾಡಬೇಕು. ಹಾಗೂ ಬೀದಿನಾಯಿಗಳ ನಿರ್ವಹಣೆಗೆ ಸಾಕಷ್ಟು ಮೊತ್ತವನ್ನು ರತನ್‌ ಟಾಟಾ ಎಂಡೋಮೆಂಟ್‌ ಫೌಂಡೇಶನ್‌ ಗೆ ರತನ್ ಟಾಟಾ ಮೀಸಲಿಟ್ಟಿದ್ದಾರೆ.

ಭಾರತದಲ್ಲಿ ಇದೇ ಮೊದಲ ಬಾರಿಗೆ ಸಾಕುನಾಯಿಗೆ ಆಸ್ತಿಯಲ್ಲಿ ಪಾಲು ನೀಡಲಾಗಿದೆ. ಟಿಟೋ ಎಂಬ ಹೆಸರಿನ ನಾಯಿ ಸತ್ತ ಬಳಿಕ ಅದೇ ಹೆಸರಿನ ಜರ್ಮನ್‌ ಶೆಫರ್ಡ್‌ ನಾಯಿಯನ್ನು ಐದರಿಂದ ಆರು ವರ್ಷಗಳ ಹಿಂದೆ ರತನ್‌ ಟಾಟಾ ದತ್ತು ಪಡೆದಿದ್ದರು. ಟಿಟೋವನ್ನು ರತನ್‌ ಟಾಟಾ ಮನೆಯ ಅಡುಗೆ ಮಾಡುವ ರಾಜನ್‌ ಶಾ ನೋಡಿಕೊಳ್ಳುತ್ತಿದ್ದಾರೆ.

ಚಾರಿಟಬಲ್ ಟ್ರಸ್ಟ್‌ಗಳಿಗೆ ಷೇರುಗಳನ್ನು ದಾನ ಮಾಡುವ ಟಾಟಾ ಗ್ರೂಪ್‌ನ ಪರಂಪರೆ, ಟಾಟಾ ಸನ್ಸ್ ನಲ್ಲಿ ಅವರ ಪಾಲನ್ನು ರತನ್ ಟಾಟಾ ಎಂಡೋಮೆಂಟ್ ಫೌಂಡೇಶನ್ (ಆರ್‌ಟಿಇಎಫ್) ಗೆ ವರ್ಗಾಯಿಸಲಾಗುತ್ತದೆ. ಟಾಟಾ ಸನ್ಸ್‌ನಲ್ಲಿನ ಷೇರುಗಳ ಹೊರತಾಗಿ, ಟಾಟಾ ಮೋಟಾರ್ಸ್ ಸೇರಿದಂತೆ ಇತರ ಟಾಟಾ ಗ್ರೂಪ್ ಉದ್ಯಮಗಳಲ್ಲಿ ರತನ್ ಟಾಟಾ ಅವರ ಆಸಕ್ತಿಗಳನ್ನು RTEF ಗೆ ಮರುನಿರ್ದೇಶಿಸಲಾಗುತ್ತದೆ.

ರತನ್ ಟಾಟಾ ವಾಸಿಸುತ್ತಿದ್ದ ಕೊಲಾಬಾದಲ್ಲಿನ ಹಲೇಕೈ ಮನೆಯು ಟಾಟಾ ಸನ್ಸ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಇವಾರ್ಟ್ ಇನ್ವೆಸ್ಟ್‌ಮೆಂಟ್‌ಗಳ ಒಡೆತನದಲ್ಲಿದೆ. 20-30 ಐಷಾರಾಮಿ ವಾಹನಗಳ ಪೋರ್ಟ್‌ಫೋಲಿಯೊ ಪ್ರಸ್ತುತ ಅವರ ಹಲೇಕೈ ನಿವಾಸ ಮತ್ತು ಕೊಲಾಬಾದಲ್ಲಿರುವ ತಾಜ್ ವೆಲ್ಲಿಂಗ್‌ಟನ್ ಮ್ಯೂಸ್ ಸರ್ವಿಸ್ ಅಪಾರ್ಟ್‌ಮೆಂಟ್‌ಗಳಲ್ಲಿದೆ.

ಕಡಲತೀರದ ಮೇಲಿರುವ ಕಾಲು ಎಕರೆ ಪ್ಲಾಟ್‌ನಲ್ಲಿರುವ ಜುಹು ಆಸ್ತಿಯನ್ನು ರತನ್ ಟಾಟಾ ಮತ್ತು ಅವರ ಕುಟುಂಬವು ಅವರ ತಂದೆ ನೇವಲ್ ಟಾಟಾ ಅವರ ಮರಣದ ನಂತರ ಪಿತ್ರಾರ್ಜಿತವಾಗಿ ಪಡೆದರು. ಇದು 2 ದಶಕಗಳಿಂದ ಖಾಲಿ ಇದ್ದು, ಇದನ್ನು ಮಾರಾಟ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments