ಮನೆ ಮುಂದೆ ರಂಗೋಲಿ ಹಾಕುತ್ತಿದ್ದ ಇಬ್ಬರ ಮೇಲೆ 17 ವರ್ಷದ ಯುವಕ ಕಾರು ಹರಿಸಿದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ.
ದೀಪಾವಳಿ ಪ್ರಯುಕ್ತ ಮನೆ ಮುಂದೆ ಅಲಂಕಾರ ಮಾಡಲು ರಂಗೋಲಿ ಬಿಡಿಸುತ್ತಿದ್ದ 14 ವರ್ಷದ ಬಾಲಕಿ ಮತ್ತು 21 ವರ್ಷದ ಯುವತಿ ಕಾರು ಹರಿದು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
17 ವರ್ಷದ ಚಾಲಕನನ್ನು ಬಂಧಿಸಲಾಗಿದ್ದು, ರಂಗೋಲಿ ಬಿಡಿಸುತ್ತಿದ್ದಾಗ ಏಕಾಏಕಿ ವೇಗವಾಗಿ ಕಾರನ್ನು ಚಲಾಯಿಸಿಕೊಂಡು ಬಂದಿದ್ದಾನೆ. ಇಬ್ಬರ ಮೇಲೆ ಕಾರು ಹರಿಸಿದ್ದೂ ಅಲ್ಲದೇ ಇತರೆ ದ್ವಿಚಕ್ರ ವಾಹನಗಳಿಗೂ ಹಾನಿ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ವಾಹನಗಳಿಗೆ ಡಿಕ್ಕಿ ಹೊಡೆಯುವಾಗ ಮತ್ತೊಮ್ಮೆ ಮಹಿಳೆಯ ಕೂದಲೆಳೆ ಅಂತರದಿಂದ ಪಾರಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಾಹನವನ್ನು ವಶಕ್ಕೆ ಪಡೆದಿದ್ದಾರೆ.
https://twitter.com/gharkekalesh/status/1851214286712111289