ಪಂಜಾಬ್ ಮಾಜಿ ಉಪ ಮುಖ್ಯಮಂತ್ರಿ ಸುಕ್ಬಿರ್ ಬಾದಲ್ ಗೆ ಅಡುಗೆ ಮನೆ ಹಾಗೂ ಬಾತ್ ರೂಮ್ ಸ್ವಚ್ಛಗೊಳಿಸುವ ಶಿಕ್ಷೆಯಲ್ಲಿ ಸಿಖ್ ಸಮುದಾಯದ ಪರಮೋಚ್ಛ ಸಂಘಟನೆಯಾದ ಅಕಲ್ ತಕ್ತ್ ವಿಧಿಸಿದೆ.
ಅಮೃತಸರದ ಸ್ವರ್ಣ ಮಂದಿರ ಸೇರಿದಂತೆ ಗುರುದ್ವಾರದ ಅಡುಗೆ ಮನೆ ಹಾಗೂ ಶೌಚಾಲಯವನ್ನು ಸ್ವಚ್ಛಗೊಳಿಸುವ ಶಿಕ್ಷೆಯನ್ನು ವಿಧಿಸಲಾಗಿದೆ.
ಪ್ರಸ್ತುತ ಪೇರೋಲ್ ಮೇಲೆ ಬಿಡುಗಡೆ ಹೊಂದಿರುವ ಜೈಲು ಶಿಕ್ಷೆಗೆ ಗುರಿಯಾದ ಡೇರಾ ಸಚ್ಛ ಸೌಧಾದ ಗುರ್ಮಿತ್ ರಾಮ್ ರಹೀಂ ಅವರನ್ನು 2015ರಲ್ಲಿ ಗುರು ಗ್ರಂಥ್ ಸಾಹಿಬ್ ತ್ಯಾಗದ ವೇಳೆ ಬೆಂಬಲಿಸಿದ್ದರು. ಅಲ್ಲದೇ ಅವರ ತಂದೆ ಹಾಗೂ ಪಂಜಾಬ್ ಮಾಜಿ ಸಿಎಂ ದಿವಂಗತ ಪ್ರಕಾಶ್ ಸಿಂಗ್ ಬಾದಲ್ ಅವರಿಗೆ 2011ರಲ್ಲಿ ಸಮುದಾಯದ ಅಭಿವೃದ್ಧಿಗೆ ನೀಡಿದ ಸೇವೆಯನ್ನು ಗುರುತಿಸಿ ನೀಡಲಾಗಿದ್ದ ಸಿಖ್ ಸಮುದಾಯದ ಗೌರವ (ಪ್ರೈಡ್ ಆಫ್ ಸಿಖ್ ಕಮ್ಯುನಿಟಿ) ವನ್ನು ವಾಪಸ್ ಪಡೆಯಲಾಗಿದೆ.
ಅಕಾಲಿದಳದ ಮುಖಂಡರು ಹಾಗೂ ಲಕ್ಷಾಂತರ ಬೆಂಬಲಿಗರನ್ನು ಹೊಂದಿರುವ ಸುಕ್ಬೀರ್ ಬಾದಲ್ ವ್ಹೀಲ್ ಚೇರ್ ಆಶ್ರಯ ಪಡೆದಿದ್ದಾರೆ. 2015ರ ಸರ್ಕಾರದಲ್ಲಿ ಸಚಿವರಾಗಿದ್ದವರು ಕೂಡಾ ಸ್ವರ್ಣ ಮಂದಿರ ಹಾಗೂ ಗುರುದ್ವಾರದ ಶೌಚಾಲಯ ಸ್ವಚ್ಛಗೊಳಿಸಲು ಸೂಚಿಸಲಾಗಿದೆ.
ಮಾಜಿ ಡಿಸಿಎಂ ಹಾಗೂ ಮಾಜಿ ಸಚಿವರು ಡಿಸೆಂಬರ್ 3ರಂದು ಮಧ್ಯಾಹ್ನ 12ರಿಂದ ಸಂಜೆ 5 ಗಂಟೆಯವರೆಗೂ ಶೌಚಾಲಯ ಸ್ವಚ್ಛಗೊಳಿಸಬೇಕು. ಸ್ನಾನ ಮಾಡಿ ಕೆಲಸ ಆರಂಭಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ಸಕ್ಬೀರ್ ಬಾದಲ್ ತಾವು ಮಾಡಿದ ತಪ್ಪುಗಳಿಗೆ ಕ್ಷಮೆಯಾಚಿಸಿದ ನಂತರ ಸಿಖ್ ಸಮುದಾಯ ಈ ಶಿಕ್ಷೆಯನ್ನು ವಿಧಿಸಿದೆ.