ಸಾಲ ಮಂಜೂರು ಮಾಡಿಸ್ತೀನಿ ಅಂತ ಕೋಳಿ ಫಾರಂ ನಡೆಸುತ್ತಿದ್ದ ರೈತನನ್ನು ನಂಬಿಸಿದ ಬ್ಯಾಂಕ್ ಮ್ಯಾನೇಜರ್ 39,000 ರೂ.ನಷ್ಟು ನಾಟಿ ಕೋಳಿಗಳನ್ನು ತಿಂದು ತೇಗಿದ್ದಾನೆ.
ಹೌದು, ಛತ್ತೀಸಗಢದಲ್ಲಿ ಈ ಘಟನೆ ನಡೆದಿರುವುದು, 12 ಲಕ್ಷ ರೂ. ಸಾಲ ಮಂಜೂರು ಮಾಡುವಂತೆ ರೈತ ಕೇಳಿಕೊಂಡಿದ್ದಾನೆ. ಭಕ್ರಾ ಸಿಕ್ಕಿದ ಎಂದು ಭಾವಿಸಿದ ಬ್ಯಾಂಕ್ ಮ್ಯಾನೇಜರ್ ಪದೇಪದೇ ನಾಟಿ ಕೋಳಿ ತರಿಸಿಕೊಂಡು ತಿಂದು ತೇಗಿದ್ದಾನೆ. ಆದರೆ ಪಾಪ ರೈತನಿಗೆ ಸಾಲ ಕೊಡಿಸದೇ ಕೈ ಎತ್ತಿ ವಂಚಿಸಿದ್ದಾನೆ.
ಮಾಸ್ತುರಿ ಜಿಲ್ಲೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮ್ಯಾನೇಜರ್ 12 ಲಕ್ಷ ರೂ. ಸಾಲ ಕೊಡಿಸುವುದಾಗಿ ರೂಪ್ ಚಂದ್ ಮನ್ಹರ್ ಅವರಿಗೆ ಭರವಸೆ ನೀಡಿದ್ದು, ಶೇ.10ರಷ್ಟು ಕಮಿಷನ್ ಕೊಡುವಂತೆ ಬ್ಯಾಂಕ್ ಮ್ಯಾನೇಜರ್ ಒತ್ತಾಯಿಸಿದ್ದಾನೆ.
ಎರಡು ತಿಂಗಳ ಕಾಲ ಸತಾಯಿಸಿ 39 ಸಾವಿರ ರೂ. ಕೋಳಿ ತಿಂದಿದ್ದೂ ಅಲ್ಲದೇ ಕಮಿಷನ್ ನೀಡಲು ರೈತ ನಿರಾಕರಿಸಿದ್ದಾನೆ. ಇದರಿಂದ ಸಾಲ ಕೊಡಿಸದೇ ಮ್ಯಾನೇಜರ್ ಕೈ ಎತ್ತಿದ್ದಾನೆ. ಮ್ಯಾನೇಜರ್ ಸಾಲ ಕೊಡಿಸದೇ ವಸೂಲಿ ಮಾಡುತ್ತಿದ್ದಾನೆ ಎಂದು ಅರಿತು ಪ್ರತಿಭಟಿಸಲು ನಿರ್ಧರಿಸಿದ್ದಾನೆ.
ಬ್ಯಾಂಕ್ ಮ್ಯಾನೇಜರ್ ವಂಚನೆಯಿಂದ ಕೆರಳಿದ ರೈತ ಪ್ರತಿಭಟನೆ ನಡೆಸಿದ್ದು, ಅಧಿಕಾರಿಗಳು ಮ್ಯಾನೇಜರ್ ಗೆ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ತಿಂದ ಕೋಳಿಗಳ ಬೆಲೆ ತೆರುವುದಾಗಿ ಒಪ್ಪಿಕೊಂಡಿದ್ದಾನೆ.