Wednesday, October 30, 2024
Google search engine
Homeಅಪರಾಧಚಿತ್ರದುರ್ಗದ ಆಶ್ರಮದ ನೀರಿನ ತೊಟ್ಟಿಯಲ್ಲಿ ತಾಯಿ-ಮಗಳ ಶವಪತ್ತೆ! ಗೋಡೆ ಮೇಲೆ ಡೆತ್ ನೋಟ್ ಪತ್ತೆ!

ಚಿತ್ರದುರ್ಗದ ಆಶ್ರಮದ ನೀರಿನ ತೊಟ್ಟಿಯಲ್ಲಿ ತಾಯಿ-ಮಗಳ ಶವಪತ್ತೆ! ಗೋಡೆ ಮೇಲೆ ಡೆತ್ ನೋಟ್ ಪತ್ತೆ!

ಆಶ್ರಮದ ನೀರಿನ ತೊಟ್ಟಿಯಲ್ಲಿ ತಾಯಿ-ಮಗಳ ಶವಪತ್ತೆಯಾಗಿರುವ ಘಟನೆ ಚಿತ್ರದುರ್ಗದ ತಿಪ್ಪೇರುದ್ರಸ್ವಾಮಿ ‌ಆಶ್ರಮದಲ್ಲಿ ನಡೆದಿದೆ.

ಚಿತ್ರದುರ್ಗದ ತುರುವನೂರು ರಸ್ತೆಯಲ್ಲಿನ ತಿಪ್ಪೇರುದ್ರಸ್ವಾಮಿ ‌ಆಶ್ರಮದಲ್ಲಿ ಪೂಜಾರಿ ಸುರೇಶ್ ಪತ್ನಿ ಗೀತಾ (42) ಹಾಗೂ ಪುತ್ರಿ ಪ್ರಿಯಾಂಕಾ (20) ಅವರ ಮೃತದೇಹಗಳು ಆಶ್ರಮದಲ್ಲಿರುವ ನೀರಿನ ತೊಟ್ಟಿಯಲ್ಲಿ ಮಂಗಳವಾರ) ರಾತ್ರಿ ಪತ್ತೆಯಾಗಿದೆ.

ತಾಯಿ-ಮಗಳು ನೀರಿನ ತೊಟ್ಟಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿತ್ತು. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಗೀತಾ ಸಾವಿಗೆ ಕಾರಣವಾಗಿರಬಹುದು ಎಂದು ಊಹಿಸಲಾಗಿತ್ತು.

ಆದರೆ ಆಶ್ರಮದ ಗೋಡೆ ಮೇಲೆ ತಾಯಿ-ಮಗಳ ಹೆಸರಲ್ಲಿ ಬರೆದಿಟ್ಟಿದ್ದ ಡೆತ್‌ ನೋಟ್‌ ಪತ್ತೆಯಾಗಿದ್ದು, ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಈ ಡೆತ್‌ ನೋಟ್‌ ಪರಿಶೀಲಿಸಿದ ಚಿತ್ರದುರ್ಗ ಬಡಾವಣೆ ಠಾಣೆ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ನಡುವೆ ಮೃತ ಗೀತಾಳ ಸಹೋದರ ಠಾಣೆಗೆ ದೂರು ನೀಡಿದ್ದು, ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ.

ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಎಸ್ಪಿ ‌ಧರ್ಮೇಂದರ್‌ ಕುಮಾರ್‌ ಮೀನಾ, ಪ್ರಕರಣದ ತನಿಖೆ ಚುರುಕುಗೊಳಿಸಿದ್ದೇವೆ. ವಶಪಡಿಸಿಕೊಂಡಿರುವ ವಸ್ತುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ. ವರದಿ ಬಂದ ಬಳಿಕ ಸತ್ಯಾಸತ್ಯತೆ ಬಯಲಾಗಲಿದೆ ಎಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments