ಮಳೆಗಾಲದಲ್ಲಿ ಎಷ್ಟೇ ಜಾಗ್ರತೆ ವಹಿಸಿದರೂ ಹಿಡಿದು ದೊಡ್ಡವರವರೆಗೆ ಕೆಮ್ಮು ಮತ್ತು ಶೀತ, ಜ್ವರ ಸಾಮಾನ್ಯ. ಈ ಸಮಯದಲ್ಲಿ ಬಾಯಿ ರುಚಿ ಕೂಡ ಕೆಟ್ಟಿರುತ್ತದೆ. ಹಾಗೆಂದು ಬಾಯಿಗೆ ರುಚಿಯೆನಿಸುವ ಎಲ್ಲವನ್ನೂ ತಿನ್ನಲಾಗದು. ಆ ಸಮಯದಲ್ಲಿ ನಮ್ಮ ಹಿರಿಯರು ಕಾಳುಮೆಣಸಿನ ಸಾರು ಸೇವಿಸುವ ಮೂಲಕ ಪರಿಹಾರ ಕಂಡುಕೊಳ್ಳುತ್ತಿದ್ದರು.
ಇದು ಬಾಯಿಗೂ ರುಚಿ, ಹೊಟ್ಟೆಗೆ ಊಟವು ಸೇರುವ ಜತೆಗೆ ದೊಡ್ಡವರವರೆಗೆ ಕೆಮ್ಮು ಮತ್ತು ಶೀತ, ಜ್ವರಶಮನಕ್ಕೂ ಸಹಕಾರಿ. ಹಾಗಿದ್ದರೆ ಈ ಸಾರು ಮಾಡುವುದು ಹೇಗೆ ತಿಳಿಯೋಣ.
ಬೇಕಾಗುವ ಸಾಮಗ್ರಿಗಳು: ಕಾಳುಮೆಣಸು- 1 ಟೇಬಲ್ ಸ್ಪೂನ್, ಬೆಳ್ಳುಳ್ಳಿ ಎಸಳು- 10, ಜೀರಿಗೆ- 1 ಚಮಚ, ದೊಡ್ಡ ನಿಂಬೆ ಗಾತ್ರದ ಹುಣಸೆಹಣ್ಣು (ರಸ), ಟೊಮೆಟೊ– 2, ಒಗ್ಗರಣೆಗೆ ಬೇಕಾದ ಎಣ್ಣೆ, ಒಣ ಮೆಣಸಿನಕಾಯಿ– 3, ಸಾಸಿವೆ- 1 ಚಮಚ, ಕರಿಬೇವಿನ ಎಲೆ ಒಂದು ಕಡ್ಡಿ, ಇಂಗು- 2 ಚಿಟಿಕೆ, ಸ್ವಲ್ಪ ಅರಶಿಣ ಪುಡಿ, ಕೊತ್ತಂಬರಿ ಸೊಪ್ಪು, ಉಪ್ಪು
ಮಾಡುವುದು ಹೇಗೆ: ಮೊದಲು ಕಾಳುಮೆಣಸು, ಜೀರಿಗೆ, ಬೆಳ್ಳುಳ್ಳಿ ಸ್ವಲ್ಪ ತರಿಯಾಗಿ ರುಬ್ಬಿಕೊಳ್ಳಿ. ಪಾತ್ರೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ ಸಾಸಿವೆ, ಕರಿಬೇವು, ಒಣಮೆಣಸು ಹಾಕಿ ಒಗ್ಗರಣೆ ಇಡಿ. ಟೊಮೆಟೊ ಸೇರಿಸಿ ಚೆನ್ನಾಗಿ ಬೇಯಿಸಿ. ನಂತರ ಬೇಕಾದಷ್ಟು ನೀರು, ರುಬ್ಬಿದ ಮಿಶ್ರಣ, ಹುಣಸೆ ಹಣ್ಣಿನ ರಸ, ಉಪ್ಪು ಹಾಕಿ ಕುದಿಸಿ. ಹಾಗೆ ಕುದಿಯುತ್ತಿರಬೇಕಾದರೆ ಕೊತ್ತಂಬರಿ ಸೊಪ್ಪು ಮತ್ತು ಇಂಗು ಹಾಕಿ ಮತ್ತೆರಡು ನಿಮಿಷ ಮಧ್ಯಮ ಉರಿಯಲ್ಲಿ ಕುದಿಸಿದರೆ ಕಾಳುಮೆಣಸಿನ ತಿಳಿ ಸಾರು ರೆಡಿ.
ಈ ಕಾಳುಮೆಣಸಿನ ಸಾರು ಅನ್ನ, ಇಡ್ಲಿ ಜೊತೆಗೆ ಚೆನ್ನಾಗಿರುತ್ತದೆ. ಮಳೆಗಾಲದಲ್ಲಿ ನೆಗಡಿ ಮತ್ತು ಕೆಮ್ಮಿನಿಂದ ಬಳಲುತ್ತಿರುವವರು ಬರೀ ರಸಂ ದಿನದಲ್ಲಿ ಒಂದೆರಡು ಗ್ಲಾಸ್ ಸೇವಿಸಿದರೆ ಆರಾಮ ಅನಿಸುವುದು.