Saturday, October 5, 2024
Google search engine
Homeಕ್ರೀಡೆಟಿ-20 ವಿಶ್ವಕಪ್: ಐರ್ಲೆಂಡ್ ವಿರುದ್ಧ ಪಾಕಿಸ್ತಾನಕ್ಕೆ ಪ್ರಯಾಸದ ಗೆಲುವು!

ಟಿ-20 ವಿಶ್ವಕಪ್: ಐರ್ಲೆಂಡ್ ವಿರುದ್ಧ ಪಾಕಿಸ್ತಾನಕ್ಕೆ ಪ್ರಯಾಸದ ಗೆಲುವು!

ಪಾಕಿಸ್ತಾನ ತಂಡ 3 ವಿಕೆಟ್ ಗಳಿಂದ ಐರ್ಲೆಂಡ್ ವಿರುದ್ಧ ಪ್ರಯಾಸದ ಗೆಲುವು ದಾಖಲಿಸುವ ಮೂಲಕ ಟಿ-20 ವಿಶ್ವಕಪ್ ನಲ್ಲಿ ಅಭಿಯಾನ ಅಂತ್ಯಗೊಳಿಸಿತು.

ಲೌಡ್ರೆಹಿಲ್ ನಲ್ಲಿ ಭಾನುವಾರ ನಡೆದ ಲೀಗ್ ನ ಕೊನೆಯ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ ತಂಡ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 106 ರನ್ ಗಳಿಸಿತು. ಸುಲಭ ಗುರಿ ಬೆಂಬತ್ತಿದ ಪಾಕಿಸ್ತಾನ 18.5 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು ಗೆಲುವು ದಾಖಲಿಸಿತು.

ಟೂರ್ನಿಯಲ್ಲಿ ಸೂಪರ್-8 ಪ್ರವೇಶಿಸಲು ವಿಫಲವಾಗಿರುವ ಪಾಕಿಸ್ತಾನ ತಂಡ ಲೀಗ್ ನ ಕೊನೆಯ ಪಂದ್ಯದಲ್ಲಿ ಗೆಲುವು ದಾಖಲಿಸಿತು. ನಾಯಕ ಬಾಬರ್ ಅಜಂ ಅಜೇಯ 32 ರನ್ ಗಳಿಸಿದರೆ, ಶಹೀನ್ ಶಾ ಅಫ್ರಿದಿ 5 ಎಸೆತದಲ್ಲಿ 2 ಸಿಕ್ಸರ್ ಸಹಾಯದಿಂದ 13 ರನ್ ಸಿಡಿಸಿ ಗಮನ ಸೆಳೆದರು.

ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಐರ್ಲೆಂಡ್ ಪರ 32 ರನ್ ಗೆ 6 ವಿಕೆಟ್ ಕಳೆದುಕೊಂಡು ತತ್ತರಿಸಿತು. ಈ ಹಂತದಲ್ಲಿ ಗೆರಾಥ್ ಡೆಲಾನಿ (31), ಜೋಸ್ ಲಿಟ್ಲ್ (22) ತಂಡವನ್ನು ಆಧರಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments