ತಮಿಳು ಚಿತ್ರರಂಗ ಖ್ಯಾತ ನಟಿ ಕೀರ್ತಿ ಸುರೇಶ್ ಮದುವೆ ಸುದ್ದಿಯ ಗುಟ್ಟು ಒಂದೊಂದಾಗಿ ರಟ್ಟಾಗುತ್ತಿದ್ದು, ಡಿಸೆಂಬರ್ ನಲ್ಲಿ ನಟಿ ದಾಂಪತ್ಯಕ್ಕೆ ಕಾಲಿಡಲಿದ್ದಾರೆ ಎಂಬ ವಿಷಯ ಇದೀಗ ಬೆಳಕಿಗೆ ಬಂದಿದೆ.
ವರುಣ್ ಧವನ್ ಜೊತೆ ಬೇಬಿ ಜಾನ್ ಚಿತ್ರದ ಮೂಲಕ ಬಾಲಿವುಡ್ ಗೆ ಪಾದರ್ಪಣೆ ಮಾಡುತ್ತಿರುವ ಬೆನ್ನಲ್ಲೇ ಕೀರ್ತಿ ಸುರೇಶ್ ಮದುವೆ ಸುದ್ದಿ ಹೊರಬಿದ್ದಿದೆ. ವಿಶೇಷ ಅಂದರೆ ಮದುವೆ ಆಗುತ್ತಿರುವ ದೀರ್ಘಕಾಲದ ಗೆಳೆಯನ ಗುಟ್ಟು ಮೊದಲ ಬಾರಿಗೆ ರಟ್ಟು ಮಾಡಿದ್ದಾರೆ.
ದುಬೈ ಮೂಲದ ಉದ್ಯಮಿ ಅಂಥೋನಿ ಥಟ್ಟಿಲ್ ಕಳೆದ 15 ವರ್ಷಗಳಿಂದ ಓಡಾಡುತ್ತಿದ್ದು, ಇದೀಗ ಡಿಸೆಂಬರ್ ನಲ್ಲಿ ಇಬ್ಬರೂ ಗೋವಾದಲ್ಲಿ ಮದುವೆ ಆಗಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಡಿಸೆಂಬರ್ 11 ಮತ್ತು 12ರಂದು ಕೀರ್ತಿ ಸುರೇಶ್ ಮತ್ತು ಅಂಥೋನಿ ಅವರ ಎರಡು ಕುಟುಂಬಗಳ ಸಮ್ಮುಖದಲ್ಲಿ ಮದುವೆ ಸಮಾರಂಭ ಅದ್ಧೂರಿಯಾಗಿ ನೆರವೇರಲಿದೆ. ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಹೇಳಿಕೆ ಬಿಡುಗಡೆ ಆಗಲಿದೆ.
ಅಂಥೋನಿ ಮತ್ತು ಕೀರ್ತಿ ಸುರೇಶ್ ಬಾಲ್ಯದ ಗೆಳೆಯರಾಗಿದ್ದು, ೨೦೨೩ರಲ್ಲಿ ಕೀರ್ತಿ ಸುರೇಶ್ ಬಾಯ್ ಫ್ರೆಂಡ್ ಬಗ್ಗೆ ವರದಿಯನ್ನು ತಳ್ಳಿ ಹಾಕಿದ್ದರು. ನನ್ನ ನಿಗೂಢ ವ್ಯಕ್ತಿಯನ್ನು ಸೂಕ್ತ ಸಮಯದಲ್ಲಿ ಬಹಿರಂಗಪಡಿಸುವುದಾಗಿ ಹೇಳಿಕೊಂಡಿದ್ದರು.