ರಸ್ತೆ ಮೇಲೆ ಕಬ್ಬಿಣದ ಹಲಗೆ ಬಿದ್ದಿದ್ದರಿಂದ ಹೊಸ ವರ್ಷದ ಸಂಭ್ರಮಾಚರಣೆಗೆ ತೆರಳುತ್ತಿದ್ದ 50ಕ್ಕೂ ಹೆಚ್ಚು ವಾಹನಗಳ ಟಯರ್ ಪಂಚರ್ ಆದ ಘಟನೆ ಮುಂಬೈ-ನಾಗ್ಪುರ ರಸ್ತೆಯಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದೆ.
ವಹಸೀಮ್ ಜಿಲ್ಲೆಯ ಮಲೆಗಾಂವ್ ಮತ್ತು ವನೋಜಾ ಟೋಲ್ ಬಳಿ ಈ ಘಟನೆ ಸಂಭವಿಸಿದ್ದು, ಬಹುತೇಕ ಕಾರು ಹಾಗೂ ಟ್ರಕ್ ಗಳ ಟಯರ್ ಗಳು ಪಂಚರ್ ಆಗಿವೆ.
50ಕ್ಕೂ ಹೆಚ್ಚು ವಾಹನಗಳು ಪಂಚರ್ ಆಗಿ ರಸ್ತೆ ಬದಿ ನಿಂತಿದ್ದರಿಂದ ವಾಹನ ದಟ್ಟಣೆ ಉಂಟಾಗಿದೆ. ಟಯರ್ ಪಂಚರ್ ಸರಿಪಡಿಸಿಕೊಳ್ಳಲು ಪರದಾಡಿದ ಸವಾರರು ರಾತ್ರಿಯೀಡಿ ಚಳಿಯಲ್ಲಿ ರಸ್ತೆ ಬದಿ ಕಾಯುವಂತಾಗಿತ್ತು.
701 ಕಿ.ಮೀ. ಉದ್ದದ ದೀರ್ಘ ಎಕ್ಸ್ ಪ್ರೆಸ್ ನಲ್ಲಿ ಈ ದುರ್ಘಟನೆ ನಡೆದಿರುವುದು ಎಕ್ಸ್ ಪ್ರೆಸ್ ರಸ್ತೆ ಗಳ ಮೇಲೆ ವಾಹ ನ ಸಂಚಾರದ ಸುರಕ್ಷತೆ ಬಗ್ಗೆ ಚರ್ಚೆಗಳು ಉಂಟಾಗಿವೆ. ಇತ್ತೀಚೆಗಷ್ಟೇ ಈ ರಸ್ತೆಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ 6 ಮಂದಿ ಮೃತಪಟ್ಟಿದ್ದರು.