Thursday, October 31, 2024
Google search engine
Homeಅಪರಾಧತಲೆ ಕಡಿದು ಕಗ್ಗೊಲೆ: ಮಗನ ರುಂಡ ತೊಡೆ ಮೇಲಿರಿಸಿ ತಾಯಿಯ ರೋಧನೆ!

ತಲೆ ಕಡಿದು ಕಗ್ಗೊಲೆ: ಮಗನ ರುಂಡ ತೊಡೆ ಮೇಲಿರಿಸಿ ತಾಯಿಯ ರೋಧನೆ!

40 ವರ್ಷದ ಭೂ ವಿವಾದದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು 17 ವರ್ಷದ ಬಾಲಕನ ರುಂಡ ಬೇರ್ಪಡಿಸಿ ಭೀಕರವಾಗಿ ಹತ್ಯೆ ಮಾಡಿದ್ದು, ತಾಯಿ ಮಗನ ರುಂಡವನ್ನು ತೊಡೆಯ ಮೇಲಿರಿಸಿಕೊಂಡು ಹಲವು ಗಂಟೆಗಳ ಗೋಳಾಡಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಜಾನ್ಪುರ್ ಜಿಲ್ಲೆಯ ಕಬಿರುದ್ದೀನ್ ಗ್ರಾಮದ ಗೌರವಬಾದ್ಶೂರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, 17 ವರ್ಷದ ರಾಮ್ ಜೀತ್ ಯಾದವ್ ಕೊಲೆಯಾಗಿದ್ದಾನೆ.

ರಾಮ್ ಜೀತ್ ಯಾದವ್ ನನ್ನು ಬೆನ್ನಟ್ಡಿದ್ದ ಕೆಲವು ವ್ಯಕ್ತಿಗಳು ಖಡ್ಗದಿಂದ ಮಾರಕ ಹಲ್ಲೆ ನಡೆಸಿದ್ದು, ರುಂಡ ಮತ್ತು ಮುಂಡವನ್ನು ಬೇರ್ಪಡಿಸಿ ವಿಕೃತಿ ಮೆರೆದಿದ್ದಾರೆ.

ಘಟನೆಯಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಖಡ್ಗ ಹಿಡಿದಿದ್ದ ವ್ಯಕ್ತಿಯ ಪತ್ತೆ ಬಲೆ ಬೀಸಲಾಗಿದೆ. ಅಲ್ಲದೇ ಗ್ರಾಮದಲ್ಲಿ ಘರ್ಷಣೆ ಸಂಭವಿಸಬಹುದು ಎಂದು ಪೊಲೀಸರು ದೌಡಾಯಿಸಿದ್ದಾರೆ.

ಮಗನ ಸಾವಿನ ಸುದ್ದಿ ಬೆನ್ನಲ್ಲೇ ಆಘಾತಗೊಂಡ ತಾಯಿ ಮಗನ ರುಂಡವನ್ನು ತೊಡೆಯ ಮೇಲಿರಿಸಿಕೊಂಡು ಹಲವು ಗಂಟೆಗಳ ಕಾಲ ರೋಧಿಸಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.

ಎರಡು ಗುಂಪುಗಳ ನಡುವೆ 40-45 ವರ್ಷಗಳಿಂದ ಭೂ ವಿವಾದ ಇದ್ದು, ರಮೇಶ್ ಮತ್ತು ಲಾಲತಾ ಇಬ್ಬರು ದಾಳಿ ಮಾಡಿದ್ದಾರೆ. ಇನ್ನು ಕೆಲವರು ದಾಳಿಯ ಹಿಂದೆ ಇದ್ದು ಅವರ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments