ಬ್ರಾಹ್ಮಣ ಕುಟುಂಬ 4 ಮಕ್ಕಳನ್ನು ಜನ್ಮ ನೀಡಲು ನಿರ್ಧರಿಸಿದರೆ 1 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ಮಧ್ಯಪ್ರದೇಶ ಸರ್ಕಾರ ಅಧೀನದ ಬ್ರಾಹ್ಮಣ ಮಂಡಳಿ ಅಧ್ಯಕ್ಷ ಪಂಡಿತ್ ವಿಷ್ಣು ರಾಜೊರಿಯಾ ಘೋಷಿಸಿದ್ದಾರೆ.
ಭಾನುವಾರ ನಡೆದ ಸಮಾರಂಭದಲ್ಲಿ ಬ್ರಾಹ್ಮಣ ಸಮುದಾಯದ ಪುರುಷೋತ್ತಮ್ ಕಲ್ಯಾಣ್ ಮಂಡಳಿ ಅಧ್ಯಕ್ಷರು ಸನಾತನ ಧರ್ಮ ರಕ್ಷಣೆಗಾಗಿ ಬ್ರಾಹ್ಮಣ ದಂಪತಿ 4 ಮಕ್ಕಳಿಗೆ ಜನ್ಮ ನೀಡಬೇಕು ಎಂದರು.
ವೈಯಕ್ತಿಕವಾಗಿ ನಾನು ಈ ಬಹುಮಾನ ಘೋಷಿಸುತ್ತಿದ್ದು, ಬ್ರಾಹ್ಮಣ ದಂಪತಿ ಜನ್ಮ ನೀಡುವ ಮಕ್ಕಳ ಜವಾಬ್ದಾರಿ ವಹಿಸಲಾಗುವುದು ಎಂದು ಸರ್ಕಾರದಲ್ಲಿ ಸಂಪುಟ ದರ್ಜೆ ಸ್ಥಾನಮಾನ ಹೊಂದಿರುವ ಅವರು ಹೇಳಿದರು.
ಇತ್ತೀಚಿನ ಯುವ ಬ್ರಾಹ್ಮಣ ದಂಪತಿ 4 ಮಕ್ಕಳನ್ನು ಹೆರಲು ನಿರ್ಧರಿಸುತ್ತಿರುವುದು ಸಂತಸದ ವಿಷಯ. ನನ್ನ ವೈಯಕ್ತಿಕ ಸಾಮರ್ಥ್ಯದ ಮೇಲೆ ಬಹುಮಾನ ಮೊತ್ತ ನೀಡುತ್ತಿದ್ದೇನೆ. ಸನಾತನ ಧರ್ಮ ಉಳಿವಿಗೆ ಬ್ರಾಹ್ಮಣ ಸಮುದಾಯದ ಜನಸಂಖ್ಯೆ ಹೆಚ್ಚುವ ಅಗತ್ಯವಿದೆ ಎಂದು ಅವರು ನುಡಿದರು.