Friday, May 17, 2024
Google search engine
Homeತಾಜಾ ಸುದ್ದಿಮಹಿಳಾ ಆಯೋಗದ 223 ಮಂದಿ ನೇಮಕಾತಿ ರದ್ದುಗೊಳಿಸಿದ ದೆಹಲಿ ಗವರ್ನರ್!

ಮಹಿಳಾ ಆಯೋಗದ 223 ಮಂದಿ ನೇಮಕಾತಿ ರದ್ದುಗೊಳಿಸಿದ ದೆಹಲಿ ಗವರ್ನರ್!

ದೆಹಲಿಯ ಮಹಿಳಾ ಆಯೋಗದ 40 ಹುದ್ದೆಗಳಿಗೆ 223 ಮಂದಿಯನ್ನು ನೇಮಕ ಮಾಡಿರುವ ಆದೇಶವನ್ನು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೆನಾ ರದ್ದುಗೊಳಿಸಿದ್ದಾರೆ.

ಆಮ್ ಆದ್ಮಿ ಪಕ್ಷದ ಸಂಸದೆ ಸ್ವಾತಿ ಮಳಿವಾಳ್ ಆಡಳಿತಾವಧಿಯಲ್ಲಿ ಮಹಿಳಾ ಆಯೋಗದ ನೇಮಕಾತಿ ನಡೆದಿತ್ತು ಎಂದು ಹೇಳಲಾಗಿದೆ.

ಲೆಫ್ಟಿನೆಂಟ್ ಗವರ್ನರ್ ವಿಕೆ ಸಿಂಗ್ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಮಹಿಳಾ ಆಯೋಗದ 40 ಹುದ್ದೆಗಳ ನೇಮಕಾತಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಆದರೆ 223 ಮಂದಿಯನ್ನು ನೇಮಕ ಮಾಡಿ ನಿಯಮ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದೆ.

ಲೆಫ್ಟಿನೆಂಟ್ ಗವರ್ನರ್ ನೇಮಕಾತಿಯನ್ನು ರದ್ದುಗೊಳಿಸಿದ ಆದೇಶವನ್ನು ಸಂಸದೆ ಸ್ವಾತಿ ಮಡಿವಾಳ್ ಪ್ರಶ್ನಿಸಿದ್ದು, ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿದ ನೇಮಕಾತಿಯನ್ನು ರದ್ದುಗೊಳಿಸಿದರೆ, ಇಡೀ ಮಹಿಳಾ ಆಯೋಗವನ್ನೇ ಮುಚ್ಚಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಆಯೋಗದಲ್ಲಿ ಒಟ್ಟು 90 ಹುದ್ದೆಗಳಿವೆ. ಇದರಲ್ಲಿ 8 ಮಂದಿ ಸರ್ಕಾರದಿಂದ ನೇಮಕಗೊಂಡವರು ಹಾಗೂ ಉಳಿದವರು 3 ತಿಂಗಳ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡವರಾಗಿದ್ದಾರೆ.

ಚುನಾವಣೆ ಸಮಯದಲ್ಲಿ ಈ ಕೆಲಸ ಏಕೆ ಮಾಡಿದರು? ನಾವು ಮಹಿಳಾ ಆಯೋಗವನ್ನು ಮುಚ್ಚಲು ಬಿಡುವುದಿಲ್ಲ. ಗವರ್ನರ್ ಆದೇಶವನ್ನು ಧಿಕ್ಕರಿಸಿದ್ದಕ್ಕಾಗಿ ಜೈಲಿಗೆ ಹಾಕಿದರೂ ಪರ್ವಾಗಿಲ್ಲ ಎಂದು ಸ್ವಾಮಿ ಮಡಿವಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments