Saturday, October 5, 2024
Google search engine
Homeತಾಜಾ ಸುದ್ದಿಚುನಾವಣಾ ಆಯೋಗದ ಮುಂದೆ ಹೈಡ್ರಾಮ: 10 ಟಿಎಂಸಿ ಸಂಸದರಿಂದ ಧರಣಿ

ಚುನಾವಣಾ ಆಯೋಗದ ಮುಂದೆ ಹೈಡ್ರಾಮ: 10 ಟಿಎಂಸಿ ಸಂಸದರಿಂದ ಧರಣಿ

ಕೇಂದ್ರ ಸರ್ಕಾರದಿಂದ ತನಿಖಾ ಸಂಸ್ಥೆಗಳ ದುರುಪಯೋಗ ಖಂಡಿಸಿ ದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗದ ಕಚೇರಿ ಮುಂದೆ 10 ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದರು ಪ್ರತಿಭಟನೆ ನಡೆಸಿದ್ದಾರೆ.

ರಾಜ್ಯಸಭಾ ಸದಸ್ಯ ಡೆರೆಕ್ ಓಬ್ರಿಯಾನ್ ನೇತೃತ್ವದಲ್ಲಿ 10 ಸಂಸದರು ಸೋಮವಾರ ಬೆಳಿಗ್ಗೆ ಪ್ರತಿಭಟನೆ ನಡೆಸಿದ್ದು, ಡೋಲಾ ಸೇನ್, ಸಾಗರಿಕಾ ಘೋಷ್, ಸಾಕೇತ್ ಘೋಖಲೆ ಮುಂತಾದ ಸಂಸದರು ಭಾಗಿಯಾಗಿದ್ದರು.

ಪೊಲೀಸರು ಪ್ರತಿಭಟನೆ ವಾಪಸ್ ಪಡೆದು ಹಿಂತಿರುಗುವಂತೆ ಮನವಿ ಮಾಡಿದರು. ಆದರೆ ಸಂಸದರ ನಿಯೋಗ ಪ್ರತಿಭಟನೆ ವಾಪಸ್ ಪಡೆಯಲು ನಿರಾಕರಿಸಿದ್ದರಿಂದ ಪೊಲೀಸರು ಮತ್ತು ಸಂಸದರ ನಡುವೆ ವಾಗ್ವಾದ ಉಂಟಾಗಿದ್ದು, ಹೈಡ್ರಾಮ ನಡೆಯಿತು.

ಪೊಲೀಸರು ಪ್ರತಿಭಟನೆ ನಡೆಸುತ್ತಿದ್ದ 10 ಸಂಸದರನ್ನು ವಶಕ್ಕೆ ಪಡೆದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments