ಶಿಕ್ಷಣ ತಜ್ಞ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊಫೆಸರ್ ಎಂಎಸ್ ತಿಮ್ಮಪ್ಪ ಮಂಗಳವಾರ ಮುಂಜಾನೆ ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.
ಅಕ್ಟೋಬರ್ 11ರಂದು ಮನ ಎಯ ಬಾತ್ ರೂಮ್ ನಲ್ಲಿ ಜಾರಿ ಬಿದ್ದಿದ್ದ ತಿಮ್ಮಪ್ಪ ಅವರಿಗೆ ತಲೆಗೆ ಗಂಭೀರ ಪೆಟ್ಟು ಬಿದ್ದಿತ್ತು. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಮಂಗಳವಾರ ಮುಂಜಾನೆ 2 ಗಂಟೆ ಸುಮಾರಿಗೆ ವಿಧಿವಶರಾದರು.
ಮನೋವಿಜ್ಞಾನ ಪ್ರಾಧ್ಯಾಪಕರಾಗಿದ್ದ ತಿಮ್ಮಪ್ಪ ಅವರು ಎರಡು ಬಾರಿ ಬೆಂಗಳೂರು ವಿವಿಯ ರಿಜಿಸ್ಟ್ರಾರ್ ಆಗಿ ನೇಮಕಗೊಂಡಿದ್ದರು. ಅಲ್ಲದೇ ವಿವಿಯ ಉಪ ಕುಲಪತಿಯಾಗಿ ಸೇವೆ ಸಲ್ಲಿಸಿದ್ದರು. ಹಲವರು ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಮುಂತಾದ ಉನ್ನತ ಶಿಕ್ಷಣಕ್ಕೆ ನೆರವಾಗಿದ್ದರು.
ಪ್ರೊ. ತಿಮ್ಮಪ್ಪ ಅವರ ಪುತ್ರಿ 200ರಲ್ಲಿ ನಿಧನರಾಗಿದ್ದರು. 2207ರಲ್ಲಿ ಪತ್ನಿಯನ್ನು ಕಳೆದುಕೊಂಡರು. ನಿವೃತ್ತಿ ನಂತರ ಒಂಟಿಯಾಗಿ ಜೀವನ ನಡೆಸುತ್ತಿದ್ದ ತಿಮ್ಮಪ್ಪ ಮಂಗಳವಾರ ಇಹಲೋಕ ತ್ಯಜಿಸಿದರು.