9
ಬಾಲಿವುಡ್ ನಟ ಶಾರೂಖ್ ಖಾನ್ ಗೆ 50 ಲಕ್ಷ ರೂ. ನೀಡುವಂತೆ ಬೆದರಿಕೆ ಹಾಕಿದ್ದ ವಕೀಲನನ್ನು ಛತ್ತೀಸಗಢದಲ್ಲಿ ಬಂಧಿಸಲಾಗಿದೆ.
ಛತ್ತೀಸಗಢದ ರಾಯಪುರ ನಿವಾಸಿ ವಕೀಲ ಫೈಜನ್ ಖಾನ್ ಗೆ ಮುಂಬೈ ಪೊಲೀಸರು ಶರಣಾಗುವಂತೆ ಸೂಚಿಸಿದ್ದರು. ಆದರೆ ಆತ ಠಾಣೆಗೆ ಹಾಕರಾಗದ ಕಾರಣ ಬಂಧಿಸಲಾಗಿದೆ.
ಸಲ್ಮಾನ್ ಖಾನ್ ಗೆ ಸತತ ಬೆದರಿಕೆ ಕರೆಗಳು ಬಂದ ನಂತರ ಶಾರೂಖ್ ಖಾನ್ ಗೆ ಬೆದರಿಕೆ ಕರೆ ಬಂದಿತ್ತು. ಮೊಬೈಲ್ ಫೋನ್ ಟ್ರೇಸ್ ಮಾಡಿದ ಪೊಲೀಸರು ವಕೀಲನು ಮಾಡಿದ ಕುಕೃತ್ಯ ಎಂದು ಪತ್ತೆ ಹಚ್ಚಿದ್ದರು. ವಕೀಲನಾಗಿದ್ದರಿಂದ ಠಾಣೆಗೆ ಹಾಜರಾಗುವಂತೆ ಸೂಚಿಸಿದ್ದರು.