ಪಾನಿಪೂರಿ ವ್ಯಾಪಾರಿಗಳು ಅಂದರೆ ಜೀವನ ನಿರ್ವಹಣೆಗೆ ರಸ್ತೆ ಬದಿಯಲ್ಲಿ ಸಣ್ಣದೊಂದಿಗೆ ಅಂಗಡಿ ಇಟ್ಟುಕೊಂಡಿರುತ್ತಾರೆ. ಅಬ್ಬಬ್ಬಾ ಅಂದರೆ ದೊಡ್ಡ ಹೋಟೆಲ್ ನಲ್ಲಿ ಒಂದು ವಿಭಾಗದಲ್ಲಿ ಪಾನಿಪೂರಿ ಮಾರೋದನ್ನು ನೋಡಿದ್ದೀರಿ. ಕೇಳಿದ್ದೀರಿ.
ಪಾನಿಪೂರಿ ಮಾರಾಟದಿಂದ ಸ್ವಂತ ಮನೆ ಕಟ್ಟಿಕೊಂಡವರ ಸಾಧನೆ ಕೇಳಿದ್ದೀರಿ. ಆದರೆ ಇಲ್ಲೋಬ್ಬ ಪಾನಿಪೂರಿ ವ್ಯಾಪಾರಿ ಆದಾಯ ನೋಡಿ ಸ್ವತಃ ಜಿಎಸ್ ಟಿ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದು, ಕೂಡಲೇ ವಿವರ ನೀಡುವಂತೆ ನೋಟಿಸ್ ಜಾರಿ ಮಾಡಿದ್ದಾರೆ.
ಹೌದು, ತಮಿಳುನಾಡಿನ ಪಾನಿಪೂರಿ ವ್ಯಾಪರಿಗೆ ಜಿಎಸ್ ಟಿ ನೋಟಿಸ್ ಬಂದಿದೆ. ಇದಕ್ಕೆ ಕಾರಣ ಆತ ಕಳೆದ ಒಂದು ವರ್ಷದಲ್ಲಿ ಅಂದರೆ 2023-24ನೇ ಸಾಲಿನಲ್ಲಿ ಸಂಪಾದಿಸಿದ್ದು ಬರೋಬ್ಬರಿ 40 ಲಕ್ಷ ರೂಪಾಯಿ!
ಜಿಎಸ್ ಟಿ ನಿಯಮಗಳ ಪ್ರಕಾರ ಇಷ್ಟು ದೊಡ್ಡ ಮೊತ್ತದ ವ್ಯವಹಾರ ಮಾಡಿ ಜಿಎಸ್ ಟಿ ಪಾವತಿಸದೇ ಇರುವುದು ಅಪರಾಧವಾಗಿದೆ.
ಆದರೆ ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, 40 ವರ್ಷ ವಾರ್ಷಿಕ ವ್ಯವಹಾರ ಅಂದರೆ ಅದು ಆದಾಯ ಅಲ್ಲ. ಇಷ್ಟು ದೊಡ್ಡ ಮೊತ್ತದ ಆದಾಯ ಬರಲು ಸಾಧ್ಯವಿಲ್ಲ. ವ್ಯವಹಾರ ಅಂದರೆ ಆದಾಯ ಅಂತಲೂ ಅಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.